ಚಿಕ್ಕಮಗಳೂರು

ಪ್ರೇಮಿಗಳ ದಿನ: ಶ್ರೀರಾಮಸೇನೆ ಪ್ರತಿಭಟನೆ

Published On :

ಚಿಕ್ಕಮಗಳೂರು: ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವುದನ್ನು ವಿರೋಧಿಸಿ ಬೈಕ್ ರ್ಯಾಲಿ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರು ವಾಲೆಂಟೈನ್ ಪ್ರತಿಕೃತಿ ದಹಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹಳೇ ತಾಲೂಕು ಕಚೇರಿಯಿಂದ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಹನುಮಂತಪ್ಪ ವೃತ್ತದಲ್ಲಿ ವಾಲೆಂಟೈನ್ ಪ್ರತಿಕೃತಿಯನ್ನು ದಹಿಸಿ ಘೋಷಣೆಗಳನ್ನು ಕೂಗಿದರು.
ಇದು ಒಬ್ಬ ಪಾದ್ರಿಯ ಹೆಸರು: ವಾಲೆಂಟೈನ್ ಎನ್ನುವುದು ಒಬ್ಬ ಪಾದ್ರಿಯ ಹೆಸರು. ಇದು ಭಾರತೀಯ ಸಂಸ್ಕೃತಿಗೆ ಮಾರಕವಾಗಿದ್ದು, ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ಹಾಳು ಮಾಡುವ ಉದ್ದೇಶದಿಂದ ಯೂರೋಪ್ ದೇಶಗಳು ನಡೆಸುತ್ತಿರುವ ಒಂದು ಹುನ್ನಾರ ಹಾಗೂ ಪಾದ್ರಿಯ ಹೆಸರು ಹೇಳಿ ಮತಾಂತರಕ್ಕೆ ಪ್ರಚೋದಿಸುವ ಕೆಲಸವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ತಂದೆ ತಾಯಿಯರ ದಿನವನ್ನಾಗಿಸಿ: ಮತ್ತೊಂದು ದೇಶದ ಪಾದ್ರಿಯ ದಿನವನ್ನು ಆಚರಿಸುವ ಬದಲು ದೇಶದ ಸ್ವಾತಂತ್ರ್ಯ ಸೇನಾನಿಯ ದಿನಾಚರಣೆಯನ್ನಾಗಿ ಈ ದಿನವನ್ನು ಆಚರಿಸಬಹುದು. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ಪ್ರೇಮಿಗಳ ದಿನವನ್ನಾಗಿ ಆಚರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಕರೆ ನೀಡಿರುವಂತೆ ಫೆ. 14ನ್ನು ತಂದೆ ತಾಯಿಯರ ದಿನವನ್ನಾಗಿ ಆಚರಿಸಲು ಮುಂದಿನ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಶ್ರೀರಾಮಸೇನೆಯ ತಾಲ್ಲೂಕು ಅಧ್ಯಕ್ಷ ಅನಿಲ್ .ಜಿ.ಕೆ. ನಾಯಕ್, ವಿಜಯ್, ಸುಪ್ರಿತ್, ರಂಜಿತ್ ಶೆಟ್ಟಿ, ಅಮಿತ್, ಮಂಜುನಾಥ್, ಸುದೀಪ್, ಚರಣ್, ರಾಜೀವ್, ಧನುಷ್  ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.