ಬರಗಾಲದಿಂದ ಅಂತರ್ಜಲ ಕುಸಿತ
ಕಡೂರು: ಕಡೂರು ಪುರಸಭೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಡೂರು ಪಟ್ಟಣದ ಹಳೇ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನ ಶುದ್ಧಗಂಗಾ ಘಟಕ ಕಟ್ಟಡದ ಉದ್ಘಾಟನೆ ನಡೆಯಿತು.
ಬರಗಾಲದ ತೀವ್ರತೆಯಿಂದ ಕುಡಿಯುವ ನೀರು ಸಿಗದೆ ಪರಿತಪಿಸುತ್ತಿರುವ ಪಟ್ಟಣದ ಜನರಿಗೆ ಪುರಸಭಾ ಸದಸ್ಯರ ಅವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಡೂರು ಪಟ್ಟಣದಲ್ಲಿ ಒಂದು ಶುದ್ಧಗಂಗಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಶುದ್ಧ ನೀರಿಗಾಗಿ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಘಟಕದ ಆರಂಭಕ್ಕಾಗಿ ಪುರಸಭಾ ಸದಸ್ಯರು ಹಾಗೂ ಧರ್ಮಸ್ಥಳ ಯೋಜನೆಯು ಸಂಯುಕ್ತವಾಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನೂತನ ಕಟ್ಟಡದ ಉದ್ಘಾಟನೆ ಮಾಡಲಾಯಿತು.
ಅಂತರ್ಜಲ ಕುಸಿತ: ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಡೂರು ಪಟ್ಟಣದಲ್ಲಿ ಮಳೆಯಿಲ್ಲದೆ ಹಲವು ವರ್ಷಗಳಿಂದ ಬರಗಾಲ ಆವರಿಸಿ ಪಟ್ಟಣದ ಕೊಳವೆ ಬಾವಿಗಳ ಅಂತರ್ಜಲ ಕುಸಿದಿದೆ. ಈ ಪರಿಸ್ಥಿತಿ ಮನಗಂಡು ಪುರಸಭಾ ಸದಸ್ಯರು, ಅಧಿಕಾರಿಗಳು ಧರ್ಮಸ್ಥಳದ ಯೋಜನೆಯೊಂದಿಗೆ ಸಮಾಲೋಚಿಸಿ ಟೆಲಿಪೋನ್ ಎಕ್ಸ್ಚೇಂಜಿಂಗ್ ಹಿಂಭಾಗ ಶುದ್ಧಗಂಗಾ ಘಟಕ ಆರಂಭಿಸಿ ಜನರಿಗೆ ಶುದ್ದ ನೀರು ನೀಡಲಾಗುತ್ತಿದೆ ಎಂದರು.
ಪುರಸಭಾ ಸದಸ್ಯ ಕೆ.ವಿ. ವಾಸು ಮಾತನಾಡಿ, ಜನರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಎಲ್ಲ ಸದಸ್ಯರೂ ಒಗ್ಗೂಡಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಕನಸಿನಂತೆ ಮಂಜುನಾಥಸ್ವಾಮಿಯವರ ಆಶೀರ್ವಾದದಿಂದ ಮತ್ತೊಂದು ಘಟಕ ಸ್ಥಾಪನೆಗೆ ಮುಂದಾಗಿದ್ದು, ಸದಸ್ಯರ ಅವಧಿ ಮುಗಿದರೂ ಕೂಡ ನಾಮಕರಣ ಸದಸ್ಯರ ಜೊತೆಗೂಡಿ ಪುರಸಭೆ ಮುಖ್ಯಾಧಿಕಾರಿಗಳು ಪಟ್ಟಣದ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರು ಸಿಗಲು ಕ್ರಮ ಕೈಗೊಳ್ಳಬೇಕು ಎಂದರು.
ಜನಪರ ಕೆಲಸ: ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ವಿ. ಉಮಾಪತಿ ಮಾತನಾಡಿ, ಶ್ರೀಕ್ಷೇತ್ರದ ಯೋಜನೆಯಿಂದ ಜನಪರ ಕೆಲಸ ಆಗುತ್ತಿವೆ. ಇಂದು ಜನರಿಗೆ ನೀರು ನೀಡುವ ಪುಣ್ಯದ ಕೆಲಸಕ್ಕೆ ಎಪಿಎಂಸಿಯಿಂದ ಜಾಗ ನೀಡಿರುವುದು ಸಂತಸದ ಸಂಗತಿಯಾಗಿದ್ದು, ಎಪಿಎಂಸಿ ಹಾಗೂ ಪುರಸಭೆ ಸದಸ್ಯರು ಉತ್ತಮ ಕಾರ್ಯ ಮಾಡುತ್ತಿದ್ದೇವೆಂಬ ಹೆಮ್ಮೆಯಿದೆ ಎಂದರು.
ಪುರಸಭೆ, ಎಪಿಎಂಸಿ ಸದಸ್ಯರು ಮತ್ತು ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಭಾರತಿ ಮಹಾಲಿಂಗ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಕುಮಾರನಾಯ್ಕ, ಉಪಾಧ್ಯಕ್ಷ ಪಂಗುಲಿ ತಿಮ್ಮಯ್ಯ, ಸದಸ್ಯ ಕೆ.ಎಚ್. ರಂಗನಾಥ್, ರೇಣುಕಾರಾಧ್ಯ, ಎನ್. ಬಶೀರ್ ಸಾಬ್, ಜಯಮ್ಮ, ಎಪಿಎಂಸಿ ಕಾರ್ಯದರ್ಶಿ ದ್ವಾರಕಾಪ್ರಸಾದ್, ಉಪಾಧ್ಯಕ್ಷ ಕೃಷ್ಣಮೂರ್ತಿ, ನಿರ್ದೇಶಕ ಎಸ್.ವಿ. ಉಮಾಪತಿ, ಗೋವಿಂದಪ್ಪ, ಸುನಿತಾ, ಸತೀಶ್, ಪುರಸಭೆ ಆರೋಗ್ಯ ನಿರೀಕ್ಷಕ ಹರೀಶ್, ಈಶ್ವರ್, ಎಂಜಿನಿಯರ್ ಮಂಜುನಾಥ್,ಶ್ರೀ ಕ್ಷೇತ್ರ ಯೋಜನೆಯ ಮೇಲ್ವಿಚಾರಕ ಶೇಖರನಾಯ್ಕ, ಮುಖಂಡ ಶ್ರೀಕಂಠ ಒಡೆಯರ್, ಕೃಷ್ಣಮೂರ್ತಿ, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

