ಸಂಘ- ಸಂಸ್ಥೆಗಳ ಸಹಕಾರದಿಂದ ಅಭಿವೃದ್ಧಿ ಸಾಧ್ಯ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಜು.5
ಸಂಘ ಸಂಸ್ಥೆಗಳು ಪರಸ್ಪರ ಕೈ ಜೋಡಿಸಿದಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶೃಂಗೇರಿಯ ಶಾರದಾ ಧನ್ವಂತರಿ ಚಾರಿಟಬಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಜಿ. ಮುರಳೀಕೃಷ್ಣ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಶಾಂತಿಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೇಸಿಐ ಬಿಳಾಲುಕೊಪ್ಪ ಮತ್ತು ಶೃಂಗೇರಿ ಶಾರದಾ ಧನ್ವಂತರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಸಮನೆ ಎಸ್ಟೇಟ್ ಕೆ.ಆರ್. ದೇವೇಂದ್ರ ಸ್ಮರಣಾರ್ಥ ಇತ್ತೀಚೆಗೆ ಆಯೋಜಿಸಿದ್ದ ರಕ್ತದಾನ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಸೇವೆ ಉದ್ದೇಶ: ಸಂಘ ಸಂಸ್ಥೆಗಳು ಲಾಭದ ದೃಷ್ಟಿಕೋನ ಹೊಂದದೇ ಸೇವೆಯ ಧ್ಯೇಯದಿಂದ ಮುನ್ನಡೆದಲ್ಲಿ ಸಮಾಜದ ಅಭಿವೃದ್ಧಿ ಸರಾಗವಾಗಲಿದೆ. ಶೃಂಗೇರಿಯ ಶಾರದಾ ಧನ್ವಂತರಿ ಆಸ್ಪತ್ರೆ ಉತ್ತಮ ಸೌಲಭ್ಯ ಹೊಂದಿದ್ದು, ತಪಾಸಣೆಗೆ ಯಾವುದೇ ಶುಲ್ಕ ಪಡೆಯಲಾಗುತ್ತಿಲ್ಲ. ಕೇವಲ ಔಷಧ ನೀಡಿಕೆಯ ಬಿಲ್ ಮಾತ್ರ ಪಡೆಯಲಾಗುತ್ತದೆ. ಅಲ್ಲದೇ ಒಳ ರೋಗಿಗಳಿಗೆ ನಿತ್ಯ ಉಚಿತ ಅನ್ನದಾನ ವ್ಯವಸ್ಥೆ ಹೊಂದಿದೆ ಎಂದು ಹೇಳಿದರು.
ಪ್ರತಿ ತಿಂಗಳ ಮೂರನೇ ಶನಿವಾರ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶೃಂಗೇರಿಗೆ ಆಗಮಿಸಿ ಕಣ್ಣು, ಚರ್ಮ, ಗಂಟಲು, ಕಿವಿ ಸೇರಿದಂತೆ ವಿವಿಧ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ರಕ್ತದಾನ ಶಿಬಿರದಲ್ಲಿ 33 ಜನ ಭಾಗವಹಿಸಿ ರಕ್ತದಾನ ಮಾಡಿದರು. 36 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 199 ಜನ ಉಚಿತ ವೈದ್ಯಕೀಯ ತಪಾಸಣೆಗೆ ಒಳಗಾಗಿ ಔಷಧಿಗಳನ್ನು ಪಡೆದರು.
ಜೇಸಿಐ ಬಿಳಾಲುಕೊಪ್ಪ ಅಧ್ಯಕ್ಷ ಬಿ.ಎಸ್. ನಾಗರಾಜ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಎಚ್.ಎನ್. ಸತೀಶ್ ಜೈನ್, ಜೇಸಿ ಕಾರ್ಯದರ್ಶಿ ಶ್ರೇಣಿಕ್ ಜೈನ್, ಎಂ.ಪಿ. ವಿನಯ್, ಅಬ್ದುಲ್ ರಜಾಕ್, ಸಂತೋಷ್, ವೈದ್ಯರಾದ ಡಾ. ಬಿ.ಎಸ್. ಶಶಿಧರ, ಡಾ. ಗೌರವ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

