ಚಿಕ್ಕಮಗಳೂರು

ನಾಳೆ ಲಯನ್ಸ್ ಪದಗ್ರಹಣ

Published On :

ಶೃಂಗೇರಿ: ಪಟ್ಟಣದ ರೈತ ಭವನದಲ್ಲಿ ಮಂಗಳವಾರ 2014 ನೇ ಸಾಲಿನ ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್, ಖಜಾಂಚಿಯಾಗಿ ಡಾ. ಅಣ್ಣಾದೊರೈ ಸೇರಿದಂತೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ರೋಟರಿ ವಲಯ ಉಪಾಧ್ಯಕ್ಷ ಮಂಜನಾಥ್ ಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ಪದಗ್ರಹಣ ಸಮಾರಂಭ ನೆರವೇರಿಸಲಿದ್ದಾರೆ. ರೋಟರಿ ಅಧ್ಯಕ್ಷ ರಾಜೇಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಬಾಂಬ್ ಸ್ಫೋಟ: ಬಿಜೆಪಿ ಖಂಡನೆ
ತರೀಕೆರೆ: ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ಭಗವಾನ್ ಬುದ್ಧನ ಮಂದಿರ ಭೋದಗಯಾದ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಿ ದೇಶ ವಿರೋಧಿಗಳು ಭಯೋತ್ಪಾದಕ ಕೃತ್ಯ ಎಸಗಿದ್ದಾರೆ.
ಈ ಕೃತ್ಯದ ಬಗ್ಗೆ ಇಂಟಲಿಜೆನ್ಸ್ ಸಂಸ್ಥೆಯವರು ನೀಡಿದ ಎಚ್ಚರಿಕೆಯನ್ನು ಬಿಹಾರ ರಾಜ್ಯ ಸರ್ಕಾರ ಸರಿಯಾಗಿ ಪರಿಗಣನೆಗೆ ತೆಗೆದುಕೊಳ್ಳದ ಫಲವೇ ಈ ಹೇಯಕೃತ್ಯ ನೆಡೆದಿದೆ. ಈ ಹೇಡಿತನದ ಕೃತ್ಯವನ್ನು ತಾಲೂಕು ಬಿ.ಜೆ.ಪಿ ತೀವ್ರವಾಗಿ ಖಂಡಿಸುತ್ತದೆ ಮತ್ತು ತನಿಖೆ ನಡೆಸಿ ವಿಧ್ವಂಸಕರನ್ನು ಶಿಕ್ಷಿಸಬೇಕು ಮತ್ತು ಪವಿತ್ರ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಾಲೂಕು
ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.