ಚಿಕ್ಕಮಗಳೂರು

ಕಲಿಕಾ ತರಬೇತಿ

Published On :

ಶೃಂಗೇರಿ: ನಾದಬ್ರಹ್ಮ ನೃತ್ಯ ಕಲಾ ಶಾಲಾ ಆಶ್ರಯದಲ್ಲಿ ಪಟ್ಟಣದ ಜಿಎಸ್‌ಬಿ ಸಭಾಂಗಣದಲ್ಲಿ 2 ದಿನಗಳ ಸುಗಮ ಸಂಗೀತ ಕಲಿಕಾ ತರಬೇತಿ ಶಿಬಿರ ಕಾರ್ಯಕ್ರಮ  ಇತ್ತೀಚೆಗೆ ನಡೆಯಿತು. ಉಪಾಸನಾ ಮೋಹನ್ ತರಬೇತಿ ಕಾರ್ಯಕ್ರಮ ನೆರವೇರಿಸಿದರು. ಶಿಬಿರದಲ್ಲಿ 15 ಕನ್ನಡ ಗೀತೆಗಳನ್ನು ಆಧುನಿಕ ತಂತ್ರಜ್ಞಾನದ ನೆರಳಲ್ಲಿ ಕಲಿಸಿಕೊಡಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ. ಶಿವಶಂಕರ್, ರಮೇಶ್ ಬೇಗಾರ್, ನೈಭಿ ಪ್ರಭಾಕರ್ ಇದ್ದರು.
28 ರಂದು ವಿಶೇಷ ಆನಂದೋತ್ಸವ
ಬೀರೂರು: ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಶಿವಮೊಗ್ಗ ಮತ್ತು ಹಾಸನ ವಲಯದ ಬೀರೂರು ಹಾಗೂ ಕಡೂರು ಶಾಖೆಯ ಸಂಯುಕ್ತ ಆಶ್ರಯದಲ್ಲಿ 28 ರಂದು ವಿಶೇಷ ಆನಂದೋತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಇಲ್ಲಿನ ಪತ್ರೆ ಕೆ. ಚನ್ನವೀರಪ್ಪಯ್ಯ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಚಾಲಕ ಡಾ. ಅನಂತಪದ್ಮನಾಭ ತಿಳಿಸಿದ್ದಾರೆ.  ಕಳೆದ 16 ವರ್ಷದಿಂದ ಪಟ್ಟಣದಲ್ಲಿ ಸಿದ್ದಿ ಸಮಾಧಿ ಯೋಗ ಪರಿಚಯ ತರಗತಿ ಪ್ರಾರಂಭಿಸಿ ಸ್ವತಹ ವೈದ್ಯರಾಗಿರುವ ಅನಂತ ಪದ್ಮನಾಭರವರು ನಾಡಿನ ಜನರ ಆರೋಗ್ಯ ಸಂರಕ್ಷಣೆ, ಜಲ ಸಂವರ್ಧನೆ, ಜಾನುವಾರು ಸಂರಕ್ಷಣೆ ಹಾಗೂ ಉತ್ತಮ ಬೆಳೆಗೆ ಪ್ರಾರ್ಥಿಸಿ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಮಾಹಿತಿಗೆ ಮೊ-9980007262.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.