ಕಚ್ಚಾಮಾಲು ಉಪಯೋಗಿಸಿ ಉದ್ಯಮ ಪ್ರಾರಂಭಿಸಿ: ಸುರೇಶ್
ಕ.ಪ್ರ.ವಾರ್ತೆ ತರೀಕೆರೆ ಜು.26
ಸ್ಥಳೀಯವಾಗಿ ದೊರೆಯುವ ಕಚ್ಚಾಮಾಲುಗಳನ್ನು ಉಪಯೋಗಿಸಿಕೊಂಡು ಉದ್ಯಮ ಪ್ರಾರಂಭಿಸಬಹುದು ಎಂದು ಚಿಕ್ಕಮಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಜಿ. ಸುರೇಶ್ ತಿಳಿಸಿದರು.
ಚಿಕ್ಕಮಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಉದ್ಯಮ ಶೀಲಾ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಗತಿಯಾಗಬೇಕು: ವ್ಯವಸಾಯೋತ್ಪನ್ನ ಉಪಕರಣ ತಯಾರಿಸಲು ಇಲಾಖೆ ತಂತ್ರಜ್ಞಾನ, ಬೆಂಬಲ ಸೇವೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಕೈಗಾರಿಕೆ ಮಾಡುವವರು ನಾನಾ ಗುಣಗಳನ್ನು ಅಳವಡಿಸಿಕೊಂಡಿರಬೇಕು, ಸಕಾರಾತ್ಮಕವಾಗಿ ಯೋಚಿಸಬೇಕು, ಎಲ್ಲ ಉದ್ಯಮಗಳು ಪ್ರಗತಿಯಾಗಬೇಕು ಎಂದು ಹೇಳಿದರು.
ಡಾ. ಅರುಂಡಿ ನಾಗರಾಜ್ ಮಾತನಾಡಿ, ಉದ್ಯಮ ಶೀಲತಾ ಪ್ರೇರಣಾ ಶಿಬಿರ ಒಂದು ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಎನ್ಎಸ್ಎಸ್ ಅಧಿಕಾರಿ ಡಾ. ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ. ಹಮೀದಾ ಬಾನು ಬೇಗಂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಿಗೂ ಸರ್ಕಾರದ ನೌಕರಿ ದೊರಕುವುದು ಕಷ್ಟ. ಸ್ವತಂತ್ರವಾಗಿ ಉದ್ಯಮ ನಿರ್ವಹಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಬಿ.ಪಿ. ಶಿವಮೂರ್ತಿ ಅರಿವು ಮತ್ತು ಉದ್ಯಮ ಪೇರಣೆ ಕುರಿತು ಮತ್ತು ಸಹಾಯಕ ನಿರ್ದೇಶಕ ರಿಯಾಜ್ ಅಹಮದ್ ರಿಯಾಯತಿ ಸೌಲಭ್ಯ ಕುರಿತು ಮಾತನಾಡಿದರು.
ಎಸ್ಎಸ್ಎಸ್ ಅಧಿಕಾರಿ ಪಿ.ಜಿ. ಶಿವಮೂರ್ತಿ, ದೊರೆರಾಜ್, ಪ್ರಾಂಶುಪಾಲ ಅಣ್ಣಪ್ಪ, ಉಪಪ್ರಾಚಾರ್ಯ ಜಯ್ಯಣ್ಣ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

