ದುರ್ಬಲರಿಗೆ ಶಕ್ತಿ ತುಂಬಿದ ಧೀಮಂತ ವ್ಯಕ್ತಿ ಅರಸು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.6
ರಾಜಕೀಯ ಕಾಲಚಕ್ರದಲ್ಲಿ ತುಳಿತಕೊಳ್ಳಗಾದವರಿಗೆ ಸಾಮಾಜಿಕ ನ್ಯಾಯ ಒದಗಿಸಿ ಬದಲಾವಣೆ ತಂದ ಮಹಾಪುರುಷ ಡಿ. ದೇವರಾಜ್ ಅರಸ್ ಎಂದು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಡಾ. ಡಿ.ಎಲ್. ವಿಜಯ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ನಗರದ ಬಾರ್ಲೈನ್ ರಸ್ತೆಯಲ್ಲಿರುವ ಬಾಲಕೀಯರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್ ಅವರ 31 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದುರ್ಬಲರ ಶಕ್ತಿ: ಸಮಾಜದಲ್ಲಿ ತುಳಿತಕೊಳ್ಳಗಾದವರಿಗೆ ಧ್ವನಿಯಾಗಲು 4 ದಶಕಗಳ ಹಿಂದೆಯೆ ಆಲೋಚಿಸಿದ ಧೀಮಂತ ನಾಯಕ ಅರಸು ರವರು ದುರ್ಬಲರಿಗೆ ಶಕ್ತಿ ತುಂಬಲು ಹಲವು ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳಿಸಿದ್ದರು. ಇಂತಹವರ ಸ್ಮರಣೆಯನ್ನು ಹಿಂದುಳಿದ ವರ್ಗದ ಬಾಲಕೀಯರ ವಿದ್ಯಾರ್ಥಿ ನಿಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೆ.ಎಂ. ನಾಗರಾಜ್ ಮಾತನಾಡಿ, ದುರ್ಬಲರ ಧ್ವನಿಯಾಗಿ ಬಡವರಿಗೆ ಹತ್ತು ಹಲವು ಮಾದರಿ ಯೋಜನೆ ರೂಪಿಸಿ ಸಾಮಾಜಿಕ ಸಮಾನತೆ ತಂದ ಶಕ್ತಿ ದೇವರಾಜ್ ಅರಸು, ಜಾತಿ, ವರ್ಗ, ಧರ್ಮದ ಪ್ರಾಬಲ್ಯ ಇದ್ದ ಸಂದರ್ಭದಲ್ಲಿ ಹಲವು ದಶಕಗಳ ಹಿಂದೆಯೇ ಸೆಣಸಾಡಿ ಹಿಂದುಳಿದ ವರ್ಗಕ್ಕೆ ನ್ಯಾಯ ದೊರಕಿಸಲು ಪಣತೊಟ್ಟ ವ್ಯಕ್ತಿ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ನೋಟ್ ಪುಸ್ತಕ ಮತ್ತು ಜಾಮಿಟ್ರಿ ವಿತರಿಸಿದರು. ಮುಖಂಡರಾದ ವೆಂಕಟೇಶ್ ನಾಯ್ಡು, ಶ್ರೀಧರ್ ಉರಾಳ್, ಹಂಪಾಪುರ ಮಂಜೇಗೌಡ, ಮನ್ಸೂರ್, ಹಿರೇಮಗಳೂರು ರಾಮಚಂದ್ರ, ಆನಂದ್ ಕುಬೇರ್ ಉಪಸ್ತಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

