ಬಸ್ ಪಲ್ಟಿ; 62 ಜನರಿಗೆ ಗಾಯ
ಕ.ಪ್ರ.ವಾರ್ತೆ ಸಾಗರ ಜೂ.7
ತಾಲೂಕಿನ ಆನಂದಪುರಂ ಸಮೀಪದ ಗಿಳಾಲಗುಂಡಿ ತಿರುವಿನಲ್ಲಿ ಚಾಲಕನ ಅತಿ ವೇಗದ ಚಾಲನೆಯಿಂದಾಗಿ ಬಸ್ ಪಲ್ಟಿ ಹೊಡೆದು 62 ಜನರು ಗಾಯಗೊಂಡ ಘಟನೆ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ನಡೆದಿದೆ.
ಗುರುವಾರ ರಾತ್ರಿ ಚಿಕ್ಕಾಬಳ್ಳಾಪುರದ ಹೊಸೋಡಿ ಗ್ರಾಮದ 62 ಜನರು ಸಿಗಂದೂರು ದೇವಸ್ಥಾನಕ್ಕೆ ಲಕ್ಷ್ಮೀ ವೆಂಕಟೇಶ್ವರ ಟ್ರಾವೆಲ್ಸ್ ಎನ್ನುವ ಖಾಸಗಿ ಬಸ್ಸಿನಲ್ಲಿ ಹೊರಟಿದ್ದರು. ಶುಕ್ರವಾರ ಬೆಳಿಗ್ಗೆ ಗಿಳಾಲಗುಂಡಿ ತಿರುವಿನಲ್ಲಿ ಬರುತ್ತಿದ್ದಾಗ ಬಸ್ಸಿನ ಹಿಂಭಾಗದ ಹೌಜಿಂಗ್ ತುಂಡಾಗಿ ಚಕ್ರಗಳು ಕಳಚಿಕೊಂಡ ಹಿನ್ನೆಲೆಯಲ್ಲಿ ಬಸ್ ಪಲ್ಟಿ ಹೊಡೆದಿದೆ. ರಸ್ತೆ ಬದಿಯಲ್ಲಿ ಮಾವಿನಮರ ಇದ್ದುದ್ದರಿಂದ ಬಸ್ ಅದಕ್ಕೆ ತಾಗಿ ನಿಂತಿದೆ. ಇಲ್ಲವಾದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.
ಅಪಘಾತದಲ್ಲಿ 62 ಜನರಿಗೆ ಗಾಯವಾಗಿದ್ದು ಅವರಲ್ಲಿ ಗಂಗಾಧರ, ಶಿವಮ್ಮ, ಲಕ್ಷ್ಮಮ್ಮ, ನಾರಾಯಣಸ್ವಾಮಿ ಹಾಗೂ ಚಿಕ್ಕವೆಂಕಟಸ್ವಾಮಿ ಎಂಬವರಿಗೆ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದವರಿಗೆ ಆನಂದಪುರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅತಿವೇಗದ ಚಾಲನೆಯೆ ಅಪಘಾತಕ್ಕೆ ಕಾರಣ ಎಂದು ಗಾಯಗೊಂಡ ಪ್ರಯಾಣಿಕರು ತಿಳಿಸಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

