ಚಿಕ್ಕಮಗಳೂರು

ಕಾಂಗ್ರೆಸ್, ಬಿಜೆಪಿಗೆ ತೃತೀಯರಂಗ ಅವಶ್ಯ: ದೇವೇಗೌಡ

Published On :

ಕ.ಪ್ರ.ವಾರ್ತೆ, ಕಡೂರು, ಜೂ.30
ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ರಚಿತಗೊಂಡಿದ್ದ ತೃತೀಯ ರಂಗದ ಅವಶ್ಯಕತೆ ಇದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು, ಈ ದೇಶ ಆಳುವ ಮೂಲಕ ಜನರು ಮತ್ತು ದೇಶವನ್ನು ಅಧಃಪತನದತ್ತ ಕೊಂಡೊಯ್ದಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ರಚಿತಗೊಂಡ ತೃತೀಯ ರಂಗಕ್ಕೆ 13 ವರ್ಷದ ಹಿಂದೆ ಈ ದೇಶದ ಜನರು ತೀರ್ಪು ನೀಡಿದ್ದರು.  
ನಾನು ಮಾತ್ರ ಪದೇ ಪದೇ ಈ ದೇಶಕ್ಕೆ ತೃತೀಯ ರಂಗದ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಆದರೆ ತೃತೀಯ ರಂಗ ಹುಟ್ಟು ಹಾಕಿದವರೇ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅಲ್ಲದೆ ಪ್ರಾದೇಶಿಕ ಪಕ್ಷಗಳಿಂದ ಹೊಸ ಕ್ರಾಂತಿ ಹುಟ್ಟು ಹಾಕಿದ್ದ ತೃತೀಯ ರಂಗವು ಸಾಧನೆ ಮಾಡಿತು. ಆದರೆ ಇಂದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂಬ ನೋವಿದೆ. ಈಗ ಕಾಲ ಬದಲಾಗಿದೆ ಜನರೂ ಬದಲಾಗಿದ್ದಾರೆ. ತೃತೀಯ ರಂಗದ ಅವಶ್ಯಕತೆ ಇದೆ. ಆದರೆ ಅದಕ್ಕೆ ಈ ದೇಶದ ಜನ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.
ಜನತಾದಳ ಪಕ್ಷವು ಹೆಸರಿಗೆ ತತ್ಕಂತೆ ಜಾತ್ಯಾತೀತ ಜನತಾದಳ ಎಂಬುದಕ್ಕೆ ಕಡೂರು ಕ್ಷೇತ್ರವೇ ಸಾಕ್ಷಿ. ತಮ್ಮ ಸಮುದಾಯದ ಕೆಲವೇ ಮತಗಳನ್ನು ಇಟ್ಟುಕೊಂಡಿರುವ ವೈಎಸ್‌ವಿ ದತ್ತ ಅವರು ಯಾವುದೇ ನಾಯಕರೂ ಜೊತೆಯಲ್ಲಿ ಬಾರದೇ ಇದ್ದರೂ ಹೆಚ್ಚಿನ ಮತ ಗಳಿಸಿ ಗೆಲವು ಸಾಧಿಸಿರುವುದೇ ಪಕ್ಷದ ಜಾತ್ಯಾತೀತಾ ನಿಲುವಾಗಿದೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸಿ, ದತ್ತರವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ವೈಎಸ್‌ವಿ ದತ್ತ, ಜೆಡಿಎಸ್ ಮುಖಂಡರಾದ ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ತಿಪ್ಪೇಶ್, ಗಂಗಾಧರನಾಯ್ಕ, ರಮೇಶ್, ನೀಲಕಂಠಪ್ಪ, ಹರೀಶ್, ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.