ಚಿಕ್ಕಮಗಳೂರು

ತನಿಖಾ ಸಿಬ್ಬಂದಿ ಕಿರುಕುಳ ಖಂಡಿಸಿ ಪ್ರತಿಭಟನೆ

Published On :

ಚಿಕ್ಕಮಗಳೂರು:  ಕೆಎಸ್‌ಆರ್‌ಟಿಸಿಯ ತನಿಖಾ ಸಿಬ್ಬಂದಿಗಳು ಕಾರ್ಮಿಕರಿಗೆ ನೀಡುತ್ತಿರುವ ಕಿರುಕುಳವನ್ನು ಖಂಡಿಸಿ ನೌಕರರು ಶನಿವಾರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.
ಘಟಕಗಳಲ್ಲಿ ವಾರದ ರಜೆ ನೀಡಬೇಕೆಂಬ ನಿಯಮವಿದ್ದರೂ ಸಹ ರಜೆಗಳನ್ನು ನೀಡುತ್ತಿಲ್ಲ. 4 ದಿನ ರಜೆಗೆ ಅರ್ಜಿ ಸಲ್ಲಿಸಿದರೆ, 2 ದಿನ ರಜೆ, ಇನ್ನುಳಿದ 2 ದಿನಗಳನ್ನು ಗೈರು ಹಾಜರಿ ಎಂಬುದಾಗಿ ಹಾಜರಿ ಪುಸ್ತಕದಲ್ಲಿ ನಮೂದಿಸುತ್ತಿದ್ದಾರೆ. ಚಿಕ್ಕಮಗಳೂರು ವಿಭಾಗದಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರೇ ಹೆಚ್ಚು. ಅವರು ತಮ್ಮ ಊರುಗಳಿಗೆ ಹೋಗಿ ಬರಲು ರಜೆ ನೀಡಲು ಸತಾಯಿಸುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ರಜೆ  ನೀಡುವ ಪರಿಪಾಠ ಬೆಳೆದುಕೊಂಡು ಬಂದಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಹಣ ವಸೂಲಿ: ತನಿಖಾ ಸಿಬ್ಬಂದಿಯವರು ತನಿಖೆಗೆ ಬಂದ ಸಂದರ್ಭದಲ್ಲಿ 1000ರಿಂದ 2000 ರುಪಾಯಿಯನ್ನು ನಿರ್ವಾಹಕರಿಂದ ವಸೂಲಿ ಮಾಡಿಕೊಂಡು ಹೋಗುತ್ತಿದ್ದಾರೆ.
ಈ ವಿಚಾರವನ್ನು ವಿಭಾಗದ ಸಂಚಾಲನಾಧಿಕಾರಿಗಳ ಮತ್ತು ವಿಭಾಗದ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದರು ಉಪಯೋಗವಾಗಿಲ್ಲ ಎಂದು ಹೇಳಿದ್ದಾರೆ.
ತನಿಖಾ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ತನಿಖೆ ಮಾಡಬೇಕು. ಹೊರ ವಿಭಾಗದ ವಾಹನವನ್ನು ತನಿಖೆ ಮಾಡಬೇಕಾದರೆ ಮೇಲಾಧಿಕಾರಿಗಳಿಂದ ಆದೇಶ ಪಡೆದಿರಬೇಕು. ಟಿ.ಸಿ. ಗಳನ್ನು ಯಾವುದೇ ಕಾರಣಕ್ಕೂ ಬಸ್ ತಪಾಸಣೆ ಮಾಡಿಸಲು ಕಳುಹಿಸಬಾರದು, ಅವರುಗಳನ್ನು ಬಸ್ ನಿಲ್ದಾಣದಲ್ಲೇ ಇದ್ದು, ಸಂಚಾರವನ್ನು ನಿಯಂತ್ರಿಸಬೇಕು. ಮತ್ತು ಹಣ ವಸೂಲಿ ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತನಿಖಾಧಿಕಾರಿಗಳಿಂದ ತನಿಖೆಗೆ ಒಳಪಟ್ಟು ತೊಂದರೆ ಅನುಭವಿಸುತ್ತಿರುವ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಘಟಕಗಳಲ್ಲಿ ಮತ್ತು ವಿಭಾಗದಲ್ಲಿರುವ ತನಿಖಾ ಸಿಬ್ಬಂದಿಗಳನ್ನು ಹೊರ ವಿಭಾಗಗಳಿಗೆ ವರ್ಗ ಮಾಡಬೇಕು. ಆಗ ದಿನವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ವಿಭಾಗಕ್ಕೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‌ನ ಮುಖಂಡರಾದ ತೋ.ಚ. ಅನಂತಸುಬ್ಬರಾವ್, ಸಾತಿ ಸುಂದರೇಶ್, ರಂಗನಾಥ್ ಹಾಗೂ ನೌಕರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.