ಚಿಕ್ಕಮಗಳೂರು

ಆರೋಗ್ಯವಂತ ಸಮಾಜಕ್ಕೆ ಶ್ರಮಿಸಿ: ಕ್ಲೀಟಸ್

Published On :

ತರೀಕೆರೆ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಪಟ್ಟಣದ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ. ವರ್ಗೀಸ್ ಕ್ಲೀಟಸ್ ಕಿವಿಮಾತು ಹೇಳಿದರು.
ವಿಕಸನ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಗಿಡ ಮೂಲಿಕಾ ಔಷಧಗಳ ಪ್ರಾತ್ಯಕ್ಷಿತೆ ಮತ್ತು ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಜನರು ಹೆಚ್ಚಿನ ರೀತಿಯಲ್ಲಿ ಸ್ಥಳೀಯವಾಗಿ ಸಿಗುವಂತಹ ಗಿಡಮೂಲಿಕೆಗಳನ್ನು ಬಳಿಸಿ ಹಲವಾರು ಕಾಯಿಲೆಗಳಿಗೆ ಔಷಧವನ್ನು ತಯಾರಿಸುವ ಜೊತೆಗೆ ಸಾವಯವ ಕೃಷಿ ಬಳಸಿ ದೀರ್ಘಾವಧಿ ಕಾಲ ಬದುಕಿರುವುದನ್ನು ನೋಡಿದ್ದೇವೆ.
ಆದರೆ ಇಂದು ಮಾನವರು, ಇಂತಹ ಪದ್ಧತಿಯನ್ನು ಮರೆತು ಇಂದಿಗೂ ತಾವು ವಾಸಿಸುತ್ತಿರುವ ಪರಿಸರದಲ್ಲಿ ಹೊಲ, ಗದ್ದೆ, ತೋಟಗಳಲ್ಲಿ ಗಿಡಮೂಲಿಕಾ ಸಸ್ಯಗಳ ಮಧ್ಯೆ ಬದುಕುತ್ತಿದ್ದರೂ ಅವುಗಳ ಉಪಯೋಗವನ್ನು ತಿಳಿಯದೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ
ಎಂದರು.
ನಾಟಿ ವೈದ್ಯೆ ಲಿಲ್ಲಿ ವರ್ಗೀಸ್ ಅವರು ಮಾತನಾಡಿ, ಗಿಡಮೂಲಿಕಾ ಔಷಧಿಗಳ ಬಗ್ಗೆ ತರಬೇತಿ ನೀಡಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸಿಗುತ್ತಿರುವ ಗಿಡಮೂಲಿಕಾ ಔಷಧಗಳ ಬಗ್ಗೆ ಪರಿಚಯ ಮಾಡಿಕೊಟ್ಟು ಅವುಗಳ ಉಪಯೋಗದ ಬಗ್ಗೆ ತಿಳಿಸಿದ ಅವರು, ಕುಮಾರಿ ಲೇಹ್ಯ, ನೋವಿನ ಎಣ್ಣೆ, ಸೆಪ್ಟಿಕ್ ಎಣ್ಣೆ, ಗ್ಯಾಸ್ಟಿಕ್ ಮಾತ್ರೆ, ಕೆಮ್ಮು, ಚೂರ್ಣ, ಅಮೃತಾಂಜನ್ ಸುಟ್ಟಗಾಯಕ್ಕೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ರೋಗಗಳಿಗೆ ಗಿಡಮೂಲಿಕಾ ಔಷಧಿಗಳನ್ನು ತಯಾರಿಸಿ ಬಳಸುವ ವಿಧಾನವನ್ನು ಹೇಳಿದರು.
ಕಡೂರು ತಾಲೂಕಿನಿಂದ 30 ಜನ, ತರೀಕೆರೆ ತಾಲೂಕಿನಿಂದ 10 ಜನ ಗಿಡಮೂಲಿಕಾ ವೈದ್ಯರುಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ನಮ್ಮೂರ ನಾಟಿ ವೈದ್ಯ ಪುಸ್ತಕ ವಿತರಿಸಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟ
ನರಸಿಂಹರಾಜಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ  ಕ್ರೀಡಾಕೂಟ ಕುವೆಂಪು ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಆರಕ್ಷಕ ವೃತ್ತ ನಿರೀಕ್ಷಿಕ ಕೃಷ್ಣಮೂರ್ತಿ ವಾಲಿಬಾಲ್ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೌಸ್ ಮೊಯಿದ್ದೀನ್, ಪ್ರಧಾನ ಕಾರ್ಯದರ್ಶಿ ಎಂ. ಪ್ರಕಾಶ್,  ಖಜಾಂಚಿ ಮೋಗಣ್ಣಗೌಡ, ಸಂಘದ ರಾಜ್ಯ ಪರಿಷತ್ ಸದಸ್ಯ ಈಶ್ವರಾಚಾರ್, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
100 ಮೀ, 200 ಮೀ, 400 ಮೀ.ಓಟ, ವಾಲಿಬಾಲ್, ಕ್ರಿಕೆಟ್, ಚೆಸ್, ಕೇರಂ ಸ್ಪರ್ಧೆ, ಷಟಲ್ ಬ್ಯಾಡ್ಮಿಂಟನ್,  ಬಾಲ್ ಬ್ಯಾಡ್ಮಿಂಟನ್ ಮುಂತಾದ ಸ್ಪರ್ಧೆಗಳು ನಡೆಯಿತು. 150 ಸರ್ಕಾರಿ ನೌಕರರು ವಿವಿಧ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಪ್ರಕಾಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.