ಮರೆಯಾಗುತ್ತಿರುವ ಅಂಟಿಕೆ- ಪಿಂಟಿಕೆ: ಜೀರುಳ್ಳಿ
ಕ.ಪ್ರ.ವಾರ್ತೆ ನರಸಿಂಹರಾಜಪುರ ಮಾ.18
ಮಲೆನಾಡಿನ ಪ್ರಸಿದ್ಧ ಜಾನಪದ ಕಲೆಯಾದ ಅಂಟಿಕೆ ಪಿಂಟಿಕೆ ಕಲೆ ನಶಿಸಿ ಹೋಗುವ ಹಂತ ತಲುಪಿರುವುದು ವಿಷಾದಕರ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಜೀರುಳ್ಳಿ ನಾಗೇಶ್ ತಿಳಿಸಿದರು.
ಟಿ.ಎಸ್. ರಾಮಚಂದ್ರರಾವ್ ವೇದಿಕೆಯಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯಲ್ಲಿ ತಾಲೂಕಿನ ಜಾನಪದ ಕಲೆಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು.
ಹಬ್ಬಕ್ಕೆ ಹಿನ್ನಡೆ: ಈ ಹಿಂದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಟಿಗೆ ಪಿಂಟಿಗೆ ನಡೆಯುತ್ತಿತ್ತು. ದೀಪಾವಳಿ ಹಬ್ಬವು 5 ರಿಂದ 7 ದಿನಗಳ ಕಾಲ ಆಚರಿಸಲಾಗುತ್ತಿತ್ತು. ಈಗ ಒಂದು ದಿನಕ್ಕೆ ದೀಪಾವಳಿ ಹಬ್ಬವು ಇಳಿದಿರುವುದು ಸಹ ಅಂಟಿಕೆ ಪಿಂಟಿಕೆ ಕಲೆಗೆ ಹಿನ್ನೆಡೆಯಾಗಿರಬಹುದು. ಆಧುನಿಕ ಭರಾಟೆಯಲ್ಲಿ ಹಬ್ಬಗಳ ಸಂಭ್ರಮವೂ ಕಡಿಮೆಯಾಗುತ್ತಿದೆ.
ದೀಪಾವಳಿ ಹಬ್ಬದ ದಿನ ಊರ ದೇವಸ್ಥಾನ ಅಥವಾ ಹಾಲು ಬರುವ ಮರದ ಬುಡದಲ್ಲಿ ಜ್ಯೋತಿಯನ್ನು ಹತ್ತಿಸಿಕೊಂಡು ಮನೆ, ಮನೆಗೆ ಗ್ರಾಮೀಣ ಸೊಗಡಿನ ಹಾಡನ್ನು ಹಾಡುತ್ತ ಅಂಟಿಕೆ ಪಿಂಟಿಗೆ ತಂಡವರು ಬರುತ್ತಿದ್ದರು. ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಕಲೆ ಮರೆಯಾಗುತ್ತಿದೆ ಎಂದ ಅವರು, ಇತ್ತೀಚಿಗೆ ನ.ರಾ.ಪುರ ತಾಲೂಕಿನ ಶೆಟ್ಟಿಕೊಪ್ಪ ಹಾಗೂ ಕೆಲವು ಭಾಗಗಳಲ್ಲಿ ಮತ್ತೆ ಕಲೆಗೆ ಪುನರ್ ಜನ್ಮ ಕೊಡುವ ಯತ್ನ ನಡೆದಿರುವುದು ಸ್ವಾಗತಾರ್ಹ ಬೆಳೆವಣಿಗೆ ಎಂದರು.
ರಾಗಿ ಬೀಸುವ ಹಾಡು ಮರೆ: ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಎ.ಬುಜಂಗಾಚಾರ್ ತಾಲೂಕಿನ ಜಾನಪದ ವೈಭವ ಎಂಬ ವಿಷಯದ ಬಗ್ಗೆ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾತ್ರೆ, ರಥೋತ್ಸವವು ಜಾನಪದ ಶೈಲಿಯನ್ನು ಬಿಂಬಿಸುತ್ತದೆ. ಕೆಲವು ಗ್ರಾಮಗಳಲ್ಲಿ ಜಾನಪದ ಶೈಲಿಯ ಕೋಲಾಟ, ಕೋಲ ಹಬ್ಬಗಳು ಇನ್ನೂ ಇದೆ. ಈ ಹಿಂದೆ ತಾಲೂಕಿನಲ್ಲಿ ಇದ್ದ ಸುಗ್ಗಿಯ ಹಾಡು, ರಾಗಿ ಬೀಸುವ ಹಾಡುಗಳು ಮರೆಯಾಗುತ್ತಿದೆ. ಬಾಳೆಹೊನ್ನೂರು ರಂಭಾಪುರಿ ಪೀಠ ಹಾಗೂ ಸಿಂಹನಗದ್ದೆ ಬಸ್ತಿಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವವು ತಾಲೂಕಿನ ಜಾನಪದ ವೈಭವ ನೆನಪಿಗೆ ಬರುತ್ತಿದೆ ಎಂದರು.
ಸಮ್ಮೇಳಾಧ್ಯಕ್ಷೆ ಎಂ. ಜಯಮ್ಮ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರಿನ ಸಾಹಿತಿ, ವಿಮರ್ಶಿಕಿ ಡಾ. ಸಂದ್ಯಾರೆಡ್ಡಿ ವಹಿಸಿದ್ದರು. ಅತಿಥಿಗಳಾಗಿ ಪಪಂ ಮಾಜಿ ಅಧ್ಯಕ್ಷೆ ರುಕ್ಣಿಣಿ ಸುರೇಶ್, ತಾಪಂ ಸದಸ್ಯೆ ಉಮಾ, ಹೇಮಲತ, ಇದ್ದರು.
ವಿಪ್ರ ಸಮ್ಮೇಳನ
ಶೃಂಗೇರಿ: ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಪಟ್ಟಣದ ಶ್ರೀ ವಿದ್ಯಾಭಾರತೀ ಸಭಾಭವನದಲ್ಲಿ ಮಾ.30 ಮತ್ತು 31ರಂದು ಕ್ಷೇತ್ರ ಮಟ್ಟದ ವಿಪ್ರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. 30ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಂದು ಬೆಳಗ್ಗೆ 9.30ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಮಣ್ಯಂ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ವಸ್ತು ಪ್ರದರ್ಶನ, ಚಿತ್ರ ಪ್ರದರ್ಶನ ಉದ್ಘಾಟನೆ ನೆರವೇರಲಿದೆ. ಮಲೆನಾಡಿನ ಬ್ರಾಹ್ಮಣ ಸಮುದಾಯದ ಬದುಕು ಬವಣೆ ಕುರಿತ ವಿಚಾರ ಗೋಷ್ಠಿ, ಕೃಷಿ ಸಮಸ್ಯೆ ಕುರಿತ ವಿಜ್ಞಾನಿ ಪ್ರಕಾಶ್ ಕಮ್ಮರಡಿ, ಬ್ರಾಹ್ಮಣ ಸಮುದಾಯದ ಸಮಸ್ಯೆ ಮತ್ತು ಪರಿಹಾರೋಪಾಯಗಳು ಕುರಿತು ಕುಂದಾಪುರದ ನಿವೃತ್ತ ಸಂಸ್ಕ್ರೃತ ಪ್ರಾಧ್ಯಾಪಕ ನರಸಿಂಹ ಮೂರ್ತಿ ಉಪನ್ಯಾಸ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

