ಚಿಕ್ಕಮಗಳೂರು

ಬಾಬಾಬುಡನ್‌ಗಿರಿಯಲ್ಲಿ ನಾಳೆಯಿಂದ ಉರುಸ್

Published On :

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಬಾಬಾಬುಡನ್ ಗಿರಿಯಲ್ಲಿ ಮಾ. 27ರಿಂದ ಮೂರು ದಿನ ಉರುಸ್ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ಇಲ್ಲಿನ ಪೂಜಾ ವಿಧಾನಕ್ಕೆ ಸಂಬಂಧಿಸಿದಂತೆ ವಿವಾದ ಇಂದಿಗೂ ಜೀವಂತವಾಗಿದ್ದರೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ  ಇಳಿಮುಖವಾಗಿಲ್ಲ. ಇಂದಿಗೂ ಕೂಡ ಈ ಕ್ಷೇತ್ರ ಹಿಂದೂ, ಮುಸ್ಲಿಮರ ಭಾವೈಕ್ಯತಾ ಕೇಂದ್ರವಾಗಿ ಉಳಿದುಕೊಂಡಿದೆ. ಮೂರು ದಿನಗಳ ಉರುಸ್‌ನಲ್ಲಿ ಮುಸ್ಲಿಂ ಜನಾಂಗದರು ಮಾತ್ರ ಭಾಗವಹಿಸುವುದಿಲ್ಲ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು ಹಾಗೂ ದೇಶದ ಇತರೆಡೆಗಳಿಂದ ಹಿಂದೂ ಸಮುದಾಯದ ಭಕ್ತರು ಆಗಮಿಸಲಿದ್ದಾರೆ.

ಗುಹೆಯೊಳಗೆ ಪ್ರವೇಶ: 2008ರಲ್ಲಿ ದತ್ತಪೀಠದ ಗುಹೆ ಕುಸಿದ್ದರಿಂದ ಭಕ್ತರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಇದೀಗ ಇಲ್ಲಿನ ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿ ನಡೆದ ದತ್ತಜಯಂತಿಯ ದಿನದಿಂದ ಗುಹೆಯೊಳಗೆ ಪ್ರವೇಶ ನೀಡಲಾಗುತ್ತಿದೆ. ಈಗ ನಿತ್ಯವೂ ಗುಹೆ ಪ್ರವೇಶಕ್ಕೆ ಅವಕಾಶ ಇದೆ. ಹಿಂದಿನ 5 ವರ್ಷಗಳಲ್ಲಿ ಗುಹೆ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಇದರಿಂದಾಗಿ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ, ಈ ಬಾರಿ  ನಿರ್ಬಂಧಗಳೇನೂ ಇಲ್ಲ. ಅದುದರಿಂದ ಈ ವರ್ಷದಲ್ಲಿ ಹೆಚ್ಚು ಭಕ್ತರನ್ನು ಉರುಸ್‌ನಲ್ಲಿ ನಿರೀಕ್ಷಿಸಲಾಗಿದೆ.
ಹಿಂದಿನ ಸಂಪ್ರದಾಯದಂತೆ ಮೊದಲನೇ ದಿನ ಚಿಕ್ಕಮಗಳೂರಿನಿಂದ ಸಂದಲ್ ತೆಗೆದುಕೊಂಡು ಹೋಗಿ ಅದನ್ನು ಗೋರಿಗಳಿಗೆ ಹಚ್ಚುವ ಮೂಲಕ ಉರುಸ್‌ಗೆ ಚಾಲನೆ ನೀಡಲಾಗುವುದು. ಮರುದಿನ ದೇಶದ ವಿವಿಧೆಡೆಗಳಿಂದ ಆಗಮಿಸುವ ಫಕೀರರ ಸಭೆ ನಡೆಯಲಿದೆ. ಕೊನೆಯ ದಿನ ಜನ್ನತ್‌ನಗರದಲ್ಲಿ ಉರುಸ್ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.