ಮಲೆನಾಡಿಗರ ನಿದ್ದೆಗೆಡಿಸಿರುವ ಡೀಮ್ಡ್ ಫಾರೆಸ್ಟ್
ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 17 ದೇಶದಲ್ಲೇ ಕೋಲಾಹಲಾ ಎಬ್ಬಿಸಿದ ಅರಣ್ಯ ಒತ್ತುವರಿ ಸಮಸ್ಯೆ ಬಗೆಹರಿಸಲು ಸುಪ್ರಿಂಕೋರ್ಟ್ ನೀಡಿದ್ದ ಆದೇಶದಂತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆಯ ತತ್ಕೊಳ ಮಿಸಲು ಅರಣ್ಯದಲ್ಲಿ ತಲಾತಲಾಂತರದಿಂದ ವಾಸವಾಗಿದ್ದ 148 ಕುಟುಂಬವನ್ನು 2002 ರ ಅಕ್ಟೋಬರ್ 2ರಂದು ತೆರವುಗೊಳಿಸಿ 612 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿತು.
ಇದರ ನೆನಪು ಮಾಸುವ ಮುನ್ನವೇ ಈಗ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಅರಣ್ಯ ಇಲಾಖೆಯಿಂದ ಪಟ್ಟಿ ಬಿಡುಗಡೆಯಾಗಿದೆ. ಇದರಂತೆ ಸುಮಾರು 35 ಗ್ರಾಮಗಳಿಂದ ಮೂರು ಸಾವಿರಕ್ಕೂ ಅಧಿಕ ಕೃಷಿಕರ ಜೀವನ ಡೋಲಾಮಾನವಾಗಲಿದೆ.
3812.40 ಹೆಕ್ಟೇರ್: ವರದಿಯೊಂದರ ಪ್ರಕಾರ ಮೂಡಿಗೆರೆ ತಾಲೂಕಿನಲ್ಲಿರುವ ಕಳಸ ಹೋಬಳಿಯ 3812.40 ಹೆಕ್ಟೇರ್ ಜಮೀನನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಲಾಗಿದ್ದು, ಇದರಿಂದ 2000 ಸಾವಿರಕ್ಕೂ ಅಧಿಕ ಸಣ್ಣ ಕೃಷಿಕರು ಬೀದಿಗೆ ಬೀಳುವ ಸಾಧ್ಯತೆ ಕಂಡುಬರುತ್ತಿದೆ.
ಕಳಸ ಹೋಬಳಿ ಹೊರತುಪಡಿಸಿ 53 ಗ್ರಾಮಗಳಾದ ಬಣಕಲ್, ಫಲ್ಗುಣಿ, ಕೋಳೂರು, ಬೆಟ್ಟಗೆರೆ, ಗುತ್ತಿ, ಹೆಸಗೋಡು, ಅತ್ತಿಗೆರೆ, ಬಿನ್ನಡಿ, ಬಂಕೇನಹಳ್ಳಿ, ಬಗ್ಗಸಗೋಡು, ಬಕ್ಕಿ, ತ್ರಿಪುರ, ಹೆಗ್ಗೋಡ್ಲು, ತತ್ಕೊಳ, ಹಳೇಮೂಡಿಗೆರೆ, ಹಳಸೇ, ಕುನ್ನಹಳ್ಳಿ, ದಾರದಹಳ್ಳಿ, ಕಡಿದಾಳು, ಬಾಳೂರು, ನಿಡುವಾಳೆ, ಕೂವೇ, ಅರಮನೆ ತಲಗೋರು, ಜಾವಳಿ, ಹಿರೇಬೈಲ್, ಕಳಸ ಕೆಳಗೂರು, ಹೆಸಗಲ್, ಕಡುವಳ್ಳಿ, ಬಿ. ಹೊಸಳ್ಳಿ, ಜಿ. ಹೊಸಳ್ಳಿ, ಕೋಗಿಲೆ, ಮೇಗೂರು, ಬಿದರಹಳ್ಳಿ, ಬೀಜವಳ್ಳಿ, ಕೆಂಜಿಗೆ, ಕೆಂಜಿಗೆ ಗುಡ್ಡ ಎಸ್ಟೇಟ್, ಅಣಜೂರ್, ಹಂತೂರ್, ಕನ್ನೆಹಳ್ಳಿ, ಹೆಗ್ರವಳ್ಳಿ, ದೇವವೃಂದ, ಹೊಸಕೆರೆ, ಕಣಚೂರು, ಹ್ಯಾರಗುಡ್ಡೆ, ಮೂಲರಹಳ್ಳಿ, ಹೋಯ್ಸಳಲು, ಜಿ.ಅಗ್ರಹಾರ, ಕಣಚೂರ್, ಯು. ಹೊಸಳ್ಳಿ, ಕನ್ನಾಪುರ, ಊರುಬಗೆಯಲ್ಲಿ 650 ಎಕರೆ, ಕುಂದೂರು- ತಳವಾರದಲ್ಲಿ 550 ಎಕರೆ ಒಟ್ಟು 630 ಹೆಕ್ಟರ್ ಪ್ರದೇಶವಾಗಿದೆ.
ಈ ಜಮಿನಿಗೆ ಸರ್ಕಾರದ ನಿರ್ದೇಶನದಂತೆ ಸಕ್ರಮಗೊಳಿಸಲು ಫಾರಂ ನಂ 53 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೂಡಿಗೆರೆ ತಾಲೂಕಿನ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ 630 ಹೆಕ್ಟೇರ್ ಅಂದರೇ 26,480 ಎಕರೆ ಪ್ರದೇಶಗಳು ಡೀಮ್ಡ್ ಫಾರೆಸ್ಟ್ ಎಂದು ತಿಳಿದು ಬಂದಿದ್ದು, ಸರ್ಕಾರ ಡೀಮ್ಡ್ ಫಾರೆಸ್ಟ್ ಎಂದು ಗುರುತಿಸುವ ಸಾಧ್ಯತೆಗಳು ಕಂಡು ಬರುತ್ತಿದೆ.
ತ್ರಿಶಂಕು ಸ್ಥಿತಿ: ಫಾರಂ ನಂ 53 ರಲ್ಲಿ ಅರ್ಜಿಸಲ್ಲಿಸಿರುವ ರೈತರಿಗೆ ಭೂ ಮಂಜುರಾತಿ ಮಾಡಲು ಡೀಮ್ಡ್ ಫಾರೆಸ್ಟ್ ಅಡ್ಡಿ ಬರುತ್ತಿದ್ದು, ಮಂಜುರಾತಿಯಾಗದೇ ಅರ್ಹ ಫಲಾನುಭವಿಗಳಿಗೆ ತ್ರಿಶಂಕು ಸ್ಥಿತಿ ಎದುರಾಗಿದೆ.
ಮಲೆನಾಡು ಭಾಗದಲ್ಲಿ ಇನಾಂ ಜಮಿನು, ಹುಲಿ ಯೋಜನೆ, ಮುತ್ತೋಡಿ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆ ಕಾಡುತ್ತಿದ್ದು, ಜನರ ತಲೆಯ ಮೇಲೆ ತೂಗು ಕತ್ತಿ ನೇತಾಡುತ್ತಿದೆ.
ಒಂದಡೇ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಸಿ 29 ಗ್ರಾಪಂ ನಿರಾಶ್ರಿತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೇ ನಿರಾಶ್ರಿತರಿಗೆ ಭೂಮಿ ನೀಡಲು ಮುಂದಾಗಿರುವ ಕಂದಾಯ ಅಧಿಕಾರಿಗಳಿಗೆ ಕಂದಾಯ ವಿಭಾಗದ ಸರ್ವೇ ನಂಬರನಲ್ಲೂ ಡೀಮ್ಡ್ ಫಾರೆಸ್ಟ್ ಕಂಡು ಬರುತ್ತಿದ್ದು, ಕಂದಾಯ ಅಧಿಕಾರಿಗಳು ನಿರಾಶ್ರಿತರಿಗೆ ಭೂಮಿ ಕೊಡುವುದಾಗಿ ಹೇಳಲೂ ಆಗದ ಪರಿಸ್ಥಿತಿ ಎದುರಾಗಿದೆ.
ಎಸ್.ಎಲ್. ರಾಘವೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

