ಎನ್‌ಆರ್‌ಪುರದಲ್ಲಿ ಶಂಕರ ಜಯಂತಿ
ನರಸಿಂಹರಾಜಪುರ: ಭಾರತದಲ್ಲಿ ಧರ್ಮ ಹಲವು ಆಕ್ರಮಣಗಳಿಗೆಗೆ ತುತ್ತಾಗಿ ಅವನತಿ ಹಾದಿ ಹಿಡಿದ ಸಂದರ್ಭದಲ್ಲಿ ಶಂಕರಾಚಾರ್ಯರು ಹಿಂದೂ ಧರ್ಮದ ತತ್ವ, ವಿಚಾರಗಳನ್ನು ಎತ್ತಿ ಹಿಡಿದು ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ್ದರು ಎಂದು ವೈಕುಂಠಪುರದ ಸಂಸ್ಕೃತ ವಿದ್ವಾನ್ ವಿಶ್ವನಾಥಶಾಸ್ತ್ರಿ ತಿಳಿಸಿದರು.
ಕಾನೂರು ಗ್ರಾಮದ ಹೊಳೆಕೊಪ್ಪ ಅನಂತಕೃಷ್ಣ ಅವರ ಮನೆಯ ಆವರಣದಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲೇ ಹಿಂದೂ ಧರ್ಮದ ಸಂರಕ್ಷಣೆ ಮಾಡಿದ್ದರು. ಅವರ ತತ್ವಗಳು ಎಲ್ಲಾ ಕಾಲಕ್ಕೂ ಸಾರ್ವಕಾಲಿಕವಾಗಿದೆ. ಅವರು ತಮ್ಮ ಜ್ಞಾನದ ಬೆಳಕಿನ ಮೂಲಕ ಧಾರ್ಮಿಕ ಕ್ಷೇತ್ರವನ್ನು ಸಂರಕ್ಷಿಸಿದ್ದರು. ಶಂಕರಾಚಾರ್ಯರ ತತ್ವಗಳು ಮನುಕುಲದ ಆಸ್ತಿ ಎಂದು ಅವರು ವರ್ಣಿಸಿದರು.
ಭಗವಂತನ ಸಾಕ್ಷಾತ್ಕಾರಕ್ಕಾಗಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಆರ್ಷೇಯ ಉಪನಿಷತ್ ದರ್ಶನ, ಸ್ತೋತ್ರ ಕಾವ್ಯಗಳ ರಚಿಸಿದ ಶಂಕರರು ಪ್ರಸ್ಥಾನತ್ರಗಳಿಗೆ ಭಾಷ್ಯ ಬರೆದು ವೇದಾಂತ ಸಾರವನ್ನು ಜಗತ್ತಿಗೆ ಉಣ ಬಡಿಸಿದರು. ಧರ್ಮದ ರಥವನ್ನು ನಿರಂತರವಾಗಿ ಎಳೆಯಬೇಕು. ಅದಕ್ಕಾಗಿ ಗುರುಗಳ ಮಾರ್ಗದರ್ಶನ ಅವಶ್ಯಕ. ಲೋಕ ಕಲ್ಯಾಣಕ್ಕಾಗಿ ಧರ್ಮ ಒಂದೇ ಸಾಧನವಾಗಿದೆ. ಶಂಕರಾಚಾರ್ಯರು ಧರ್ಮ ರಕ್ಷಣೆಗೆ ಹಲವು ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಶಂಕರರ ಶ್ರಮದಿಂದ ತತ್ವ ಶಾಸ್ತ್ರಗಳೆಂದರೆ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

