ಪರಿಹಾರ ಚೆಕ್ ವಿತರಣೆ
ಮೂಡಿಗೆರೆ: ಚುನಾವಣೆ ಸಂದರ್ಭದಲ್ಲಿ ಹಾಲು ಹಾಕಿ ಮತ ಚಲಾಸಲು ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಒಂಟಿ ಸಲಗ ತುಳಿದು ಸಾಯಿಸಿದ್ದು, ಮೃತ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಂದ ಬಂದಂತಹ ಪರಿಹಾರದ ಚೆಕ್ಕನ್ನು ಕ್ಷೇತ್ರದ ಶಾಸಕ ಬಿ.ಬಿ. ನಿಂಗಯ್ಯ ವಿತರಿಸಿದರು.
ತಾಲೂಕಿನ ಫಲ್ಗುಣಿ ಗ್ರಾಮದಲ್ಲಿ ಮೇ 5 ರ ಬೆಳಗ್ಗೆ 6.30 ರ ಸಮಯದಲ್ಲಿ ನಾಸೀರ್ ಖಾನ್ ಎಂಬುವವರು ಹಾಲು ಹಾಕಿ ಮತ ಚಲಾಸಲು ಮತಗಟ್ಟೆಗೆ ಬರುತ್ತಿದ್ದ ವೇಳೆ ದೇವಾಲಯದ ಕಡೆಯಿಂದ ಪ್ರತ್ಯಕ್ಷವಾದ ಒಂಟಿ ಸಲಗ ನಾಸೀರ್ ಖಾನ್ ಅವರನ್ನು ಸಾಯಿಸಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಮತ್ತು ಅರಣ್ಯ ಇಲಾಖೆ ರು. 5 ಲಕ್ಷ ಪರಿಹಾರದ ಚೆಕ್ಕನ್ನು ನೀಡಿದೆ. ಭಾನುವಾರ ಸಂಜೆ ಅರಣ್ಯ ಇಲಾಖೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಸೀರ್ ಖಾನ್ ಪತ್ನಿ ಗೆ ರು. 5 ಲಕ್ಷದ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಅರಣ್ಯಾಧಿಕಾರಿ ರವಿರಾಜ್ ನಾರಾಯಣ್ ವಹಿಸಿದ್ದರು. ವಿಪರಿಷತ್ಸ್ದಸ್ಯೆ ಮೋಟಮ್ಮ, ಸಹಾಯಕ ಸಂರಕ್ಷಣಾಧಿಕಾರಿ ರಮೇಶ್ಬಾಬು, ಅರಣ್ಯಾಧಿಕಾರಿ ಸುದರ್ಶನ್, ಮುಖಂಡ ಹೇಮಶೇಖರ್, ನೇಮಿರಾಜ್, ಜಿಪಂ ಸದಸ್ಯ ಎಂ.ಎಸ್. ಅನಂತ್, ಪುಟ್ಟಸ್ವಾಮಿ, ಜನಶಕ್ತಿಯ ಗೌಸ್ ಮೋಹಿದ್ದೀನ್, ತಾಪಂ ಸದಸ್ಯೆ ರಂಜನ್ ಅಜಿತ್ ಕುಮಾರ್ ಸೇರಿದಂತೆ ಅನೇಕ ಗಣ್ಯರುಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

