ಚಿಕ್ಕಮಗಳೂರು

ಇಂದು ಆರೋಗ್ಯ ತಪಾಸಣೆ

Published On :

ಕೊಪ್ಪ: ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಸುರಕ್ಷ ಯೋಜನೆಯ ಸಹಭಾಗಿತ್ವದಲ್ಲಿ ಸೂಪರ್ ಸ್ಪೆಷಾಲಿಟಿ ಶಿಬಿರವನ್ನು ನ.14ರ ಬೆಳಗ್ಗೆ 9-30 ರಿಂದ 3ಗಂಟೆ ವರೆಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಹೃದಯ ರೋಗ, ಹೃದಯ ಶಸ್ತ್ರ ಚಿಕಿತ್ಸೆ ಮತ್ತು ಮೂತ್ರಪಿಂಡ, ನರರೋಗ, ಅಪಘಾತ, ಸುಟ್ಟಗಾಯ ಮತ್ತು ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ತಪಾಸಣೆ, ಅಗತ್ಯವಿದ್ದಲ್ಲಿ ಉಚಿತವಾಗಿ ಇಸಿಜಿ ಹಾಗೂ ಎಕೋ ತಪಾಸಣೆಯನ್ನು ನಡೆಸಿ ಚಿಕಿತ್ಸೆಯನ್ನು ನೀಡಲಾಗುವುದು.  ಈ ಶಿಬಿರದ ಉಪಯೋಗ ಪಡೆಯುವರು ಕಡ್ಡಾಯವಾಗಿ ಪೋಟೋ ಇರುವ ಬಿಪಿಎಲ್ ಕಾರ್ಡು ಮತ್ತು ಈ ಹಿಂದೆ ಚಿಕಿತ್ಸೆ ಪಡೆದುಕೊಂಡ ವೈದ್ಯರ ಚಿಕಿತ್ಸಾ ಸಲಹ ಚೀಟಿಯನ್ನು ತಪ್ಪದೆ ತರಬೇಕಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಬಾಬ್ ಜತ್ತನ್ನ -9964899054 ಇವರನ್ನು ಸಂರ್ಕಿಸಬಹುದಾಗಿದೆ.
ಚುನಾಯಿತ ಪ್ರತಿನಿಧಿಗಳಿಗೆ ಅಗೌರವ: ಖಂಡನೆ
ತರೀಕೆರೆ: ತಾಲೂಕು ನಾಡಹಬ್ಬ ಆಚರಣೆ ಸಮಿತಿ ನ.12ರಂದು ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಯಾವುದೇ ಚುನಾಯಿತ ಪ್ರತಿನಿಧಿಗಳನ್ನು ಕರೆಯದೆ ಸಭೆ ನಡೆಸುವುದರ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಆಗೌರವ ತೋರಿಸಿರುವುದು ಖಂಡನೀಯ ಎಂದು ಪುರಸಭೆ ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಿರುವುದರ ಜೊತೆಗೆ ಕುರುಬ ಸಮಾಜದ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವ ಉದ್ದೇಶವನ್ನು ನಾಡಹಬ್ಬ ಆಚರಣೆ ಸಮಿತಿ
ಸ್ಪಷ್ಟಪಡಿಸಬೇಕು. ನಗರದಲ್ಲಿ ನಡೆಯುವ ಎಲ್ಲಾ ನಾಡಹಬ್ಬಗಳಿಗೂ ಪುರಸಭೆ ವತಿಯಿಂದ ಎಲ್ಲಾ ಸವಲತ್ತುಗಳನ್ನು ನೀಡುವ ಜವಾಬ್ದಾರಿಯನ್ನು ಪುರಸಭೆ ಸದಸ್ಯರು ಪ್ರಾಮಾಣಿಕವಾಗಿ ಮಾಡಿದರೂ ಯಾವುದೇ ಸಭೆಗಳಿಗೆ ಕರೆಯದೆ ಹಗೆತನ ತೋರಿಸುವ ಪದ್ಧತಿ ನಿರಂತರವಾಗಿ ಮಾಡುತ್ತಿರುವುದು ನಿಲ್ಲಬೇಕು ಎಂದಿದ್ದಾರೆ.
17ರಂದು ಲಕ್ಷ ದೀಪೋತ್ಸವ
ಬಾಳೆಹೊನ್ನೂರು: ಇಲ್ಲಿನ ಜಗದ್ಗುರು ರಂಭಾಪುರೀ ಪೀಠದಲ್ಲಿ ಕಾರ್ತೀಕ ಲಕ್ಷ ದೀಪೋತ್ಸವ ಸಮಾರಂಭ ನ.17 ರಂದು ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಲಿದೆ.  ಈ ಸಮಾರಂಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಸುಳ್ಯ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.