ಸಮಾಜ ವಿಭಜಿಸುತ್ತಿರುವ ಕಾಂಗ್ರೆಸ್: ಸಿ.ಟಿ. ರವಿ
ಕ.ಪ್ರ.ವಾರ್ತೆ , ಕೊಪ್ಪ , ನ. 23
ಸಮಾಜದಲ್ಲಿ ಮಕ್ಕಳ ನಡುವೆ ಬೇಧ ಭಾವದ ನೀತಿ ಅನುಸರಿಸಿ, ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಶನಿವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಶೃಂಗೇರಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಬಂದು 66 ವರ್ಷದಲ್ಲಿ 60 ವರ್ಷ ದೇಶವನ್ನು ಆಳಿದ ಅನುಭವಿದ್ದರೂ ಇನ್ನೂ ಅನೇಕ ವಿಚಾರವನ್ನು ತಿಳಿದಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ಬಂದು ನೀಡಿ ಭರವಸೆಗಳನ್ನು ಒಂದನ್ನು ಈಡೇರಿಸಿಲ್ಲ. ಸಣ್ಣ ರೈತರ ಒತ್ತುವರಿ ನೆಪದಲ್ಲಿ ಶೋಷಣೆ ಮಾಡುತ್ತಿದ್ದಾರೆ. ಅತಿವೃಷ್ಟಿಯಲ್ಲಿ ಹಾನಿಯಾದ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡದೇ ರೈತರನ್ನು ಅವಮಾನವೀಯವಾಗಿ ನಡೆಸುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ಸ ದೊಡ್ಡ ಕೋಮುವಾದಿ ಪಕ್ಷ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಎಲ್ಲಾ ಜಾತಿ, ವರ್ಗದವರಿಗೆ ಸಾಮಾನವಾಗಿ ಕಂಡು ವಿವಿಧ ಯೋಜನೆಯನ್ನು ಜಾರಿಗೆ ತಂದು ಎಲ್ಲಾ ಸಮುದಾಯ ಅಭಿವೃದ್ಧಿಗೆ ಶ್ರಮಿಸಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಸಮುದಾಯಗಳನ್ನು ಒಡೆದು ಅಳುವ ಮೂಲಕ ಅತೀ ದೊಡ್ಡ ಕೋಮುವಾದಿ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಪತನದ ಸಂಕೇತ: ಕಾಂಗ್ರೆಸ್ ಪಕ್ಷ ಗಣಿ ಹಗರಣವನ್ನು ಮೆಟ್ಟಿಲು ಮಾಡಿಕೊಂಡು ಅಧಿಕಾರ ಬಂದ ಆರು ತಿಂಗಳಲ್ಲಿ ಅದೇ ಗಣಿ ಹಗರಣದಲ್ಲಿ ಸಿಲುಕಿ ಪಕ್ಷದ ಒಬ್ಬ ಶಾಸಕ ರಾಜಿನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪತನದ ಸಂಕೇತವಾಗಿದೆ ಎಂದರು.
ನಾನು ಮತ್ತು ಜೀವರಾಜ್ ಮಂತ್ರಿಯಾದ ಸಂದರ್ಭದಲ್ಲಿ ಪೈಪೋಟಿಯಿಂದ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಮಾಡಿ ಅಪಾರ ಜನ ಮೆಚ್ಚುಗೆ ಗಳಿಸಿದ್ದೇವು. ಶೃಂಗೇರಿ ಕ್ಷೇತ್ರದಲ್ಲಿ ಡಿ.ಎನ್. ಜೀವರಾಜ್ ಅವರನ್ನು ನೇರ ರಾಜಕೀಯದಿಂದ ಸೋಲಿಸಲಾಗದ ಶಕ್ತಿಗಳು ಷಡ್ಯಂತ್ರಕ್ಕೆ ಮುಂದಾಗಿರುವುದು ವಿಷಾದನೀಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ ಮಾತನಾಡಿ, ಕೇಂದ್ರ ಯೋಜನಾ ಆಯೋಗದ ಸದಸ್ಯ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿರುವುದು ಈ ಭಾಗದ ರೈತರ ಹಾಗೂ ಜನಜೀವನ ದುರಂತವಾಗುವ ಸ್ಪಷ್ಟ ಮುನ್ಸೂಚನೆ. ಕ್ಷೇತ್ರದ ಸಂಸದರು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎನ್. ಭಾಸ್ಕರ್ ರಾವ್, ಎನ್.ಆರ್. ಪುರ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಶೃಂಗೇರಿ ಅಧ್ಯಕ್ಷ ನಟೇಶ್, ಕೊಪ್ಪ ತಾಪಂ ಅಧ್ಯಕ್ಷೇ ಪದ್ಮವತಿ ರಮೇಶ್, ಜಿಪಂ ಉಪಾಧ್ಯಕ್ಷೆ ಸುಜಾತ, ಬಿಜೆಪಿ ಮುಖಂಡರಾದ ಮಳಿಗೆ ಚಂದ್ರಶೇಖರ್, ಪುಣ್ಯ ಪಾಲ್, ಕೆಸವೆ ಶಾಂತ ರಾಮ್ ಮೊದಲಾದವರು ಇದ್ದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ಬಂದು ನೀಡಿ ಭರವಸೆಗಳನ್ನು ಒಂದನ್ನು ಈಡೇರಿಸಿಲ್ಲ. ಸಣ್ಣ ರೈತರ ಒತ್ತುವರಿ ನೆಪದಲ್ಲಿ ಶೋಷಣೆ ಮಾಡುತ್ತಿದ್ದಾರೆ. ಅತಿವೃಷ್ಟಿಯಲ್ಲಿ ಹಾನಿಯಾದ ರೈತರಿಗೆ ಸಮರ್ಪಕವಾದ ಪರಿಹಾರವನ್ನು ನೀಡದೇ ರೈತರನ್ನು ಅವಮಾನವೀಯವಾಗಿ ನಡೆಸುಕೊಳ್ಳುತ್ತಿದ್ದಾರೆ
- ಸಿ.ಟಿ.ರವಿ, ಶಾಸಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

