ಚಿಕ್ಕಮಗಳೂರು

'ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳದಿರಿ'

Published On :

ತರೀಕೆರೆ: ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವ ಸಂಸ್ಕೃತಿ ಅಮಾನವೀಯ ಹಾಗೂ ಅನಾಗರಿಕ ವ್ಯವಸ್ಥೆ ಎಂದು ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ತಿಳಿಸಿದ್ದಾರೆ. ಅವರು, ಸಮೀಪದ ಚಿಕ್ಕಾನವಂಗಲದಲ್ಲಿ ಲಿಂಗೈಕ್ಯ ಗೌರಮ್ಮನವರ ಶಿವಗಣಾರಾಧನೆ ಮತ್ತು ಸರ್ವಶರಣರ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.  ಮಾತಾ ಪಿತೃಗಳೆಂದರೆ ದೈವಸ್ವರೂಪಿಗಳೆಂದು ಭಾವನೆ ಹೊಂದಿ ವೃದ್ಧರ ಪೋಷಣೆ ಹಾರೈಕೆಯಲ್ಲಿ ತೊಡಗುತ್ತಿದ್ದ ವ್ಯವಸ್ಥೆ ಬದಲಾಗುತ್ತಾ ವೃದ್ಧಾಶ್ರಮಗಳಿಗೆ ಸೇರಿಸುವಂತಹ ಪ್ರಸ್ತುತ ಸ್ಥಿತಿ-ಗತಿ ಮಾನವೀಯತೆಯಲ್ಲ.  ಇಂತಹ ಮಾರ್ಗದಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ದುರದೃಷ್ಟಕರ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಡಿ.ಎಸ್. ಸುರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ್, ಜಿಪಂ ಸದಸ್ಯ ಆನಂದಪ್ಪ, ಶಾಂತಾ ಗಂಗಾಧರ್, ಡಿ.ಎಸ್. ಶಂಕರಲಿಂಗಪ್ಪ, ಗಂಗಾಧರಪ್ಪ, ಎ.ಸಿ. ಚಂದ್ರಪ್ಪ, ಹಾಲಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.