ರಸಪ್ರಶ್ನೆ: ಸೌಜನ್ಯ, ಸನ್ನಿಧಿಗೆ ಪ್ರಥಮ
ನರಸಿಂಹರಾಜಪುರ: ಮಹಾವೀರ ದಿಗಂಬರ ಜೈನ್ ಸಮಾಜ, ಸಿಂಹನಗದ್ದೆ ಜೈನ್ ಮಿಲನ್ ಹಾಗೂ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ನಡೆಯಿತು.
ಕನ್ನಡ ಮಾಧ್ಯಮದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಸೌಜನ್ಯ ಜೈನ್ ಮತ್ತು ಸನ್ನಿಧಿ ಪ್ರಥಮ ಸ್ಥಾನ ಪಡೆದರು.
ಸರ್ಕಾರಿ ಪ್ರೌಢ ಶಾಲೆಯ ಕೆ.ಎಸ್. ಇಂಚರ ಮತ್ತು ಎಂ.ಪಿ. ಶ್ವೇತ ದ್ವಿತೀಯ ಹಾಗೂ ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯ ಸಂಧ್ಯಾ ಮತ್ತು ರಮ್ಯ ತೃತೀಯ ಸ್ಥಾನ ಪಡೆದರು. ಆಂಗ್ಲ ಮಾಧ್ಯಮದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಿಸಿಎಂಸಿ ಪ್ರೌಢ ಶಾಲೆಯ ಹೈಪ ಫಾತಿಯಾ ಮತ್ತು ವಿಜಯತ ಪ್ರಥಮ ಸ್ಥಾನ ಪಡೆದರು.
ಬಾಳೆಹೊನ್ನೂರಿನ ಬಿಜಿಎಸ್ ಪ್ರೌಢ ಶಾಲೆಯ ಇಂಚರ ಮತ್ತು ಸುಮನ ರೆಹಮಾನ್ ದ್ವಿತೀಯ ಹಾಗೂ ಜೀವನಜ್ಯೋತಿ ಪ್ರೌಢ ಶಾಲೆಯ ಕೆ.ಎಸ್. ದೀಪ್ತಿ ಮತ್ತು ಯುವರಾಜ್ ತೃತೀಯ ಬಹುಮಾನ ಪಡೆದರು.
20ರಂದು ತರಬೇತಿ: ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ತಾಲೂಕು ದೈಹಿಕ ಪರಿವೀಕ್ಷಕ ಕೆ.ಮೌನೇಶ್ವರಾಚಾರ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ದೃಷ್ಟಿಯಿಂದ ಈಗಾಗಲೇ ಪರೀಕ್ಷೆ ತಯಾರಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ. ಫೆಬ್ರವರಿ 20ರಂದು ಮತ್ತೆ ಪರೀಕ್ಷೆ ತಯಾರಿ ಬಗ್ಗೆ ಶಿಕ್ಷಣ ಇಲಾಖೆಯಿಂದ ತರಬೇತಿ ಹಮ್ಮಿಕೊಂಡಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಮಹಾವೀರ ದಿಗಂಬರ ಜೈನ್ ಸಮಾಜದ ಅಧ್ಯಕ್ಷ ಪ್ರವೀಣ ಅಧ್ಯಕ್ಷತೆ ವಹಿಸಿದ್ದರು. ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಲೋಕರಾಜ್ ಇದ್ದರು. ಜಿನ ರಾಜೇಂದ್ರ ಸ್ವಾಗತಿಸಿದರು. ಗುಣಪಾಲ್ ಜೈನ್ ನಿರೂಪಿಸಿದರು. ಸುಜಾತ ಹೆಗಡೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

