'ಟೀ ಮಾರಿದವರಿಗೆ ಬಡವರ ಬಗ್ಗೆ ಅರಿವು ಸಹಜ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ಫೆ.2
ಟೀ ಮಾರಿಕೊಂಡು ಸ್ವಾಭಿಮಾನದಿಂದ ಜೀವನ ಸಾಗಿಸಿದವರಿಗೆ ಬಡವರ ಕಷ್ಟ ಸುಖಗಳ ಬಗ್ಗೆ ಅರಿವಿರುತ್ತದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಗರ ಕಾರ್ಯದರ್ಶಿ ರಾಬರ್ಟ್ ಹೇಳಿದ್ದಾರೆ.
ನಗರದ ವಿಜಯಪುರ, ಗೌರಿಕಾಲುವೆ ಮತ್ತು 60 ಅಡಿ ರಸ್ತೆ ಸೇರಿದಂತೆ ವಿವಿಧೆಡೆಯಲ್ಲಿ ಜನ ಜಾಗರಣ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಎಸಿ ರೂಮಿನ ಮಂತ್ರಿಗಳು, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯವರ ಬಗ್ಗೆ ಟೀ ಮಾರಿದವರಿಗೆ ದೇಶ ಆಳಲು ಸಾಧ್ಯವೇ ಎಂದು ಹೇಳಿಕೆ ನೀಡುವ ಮೂಲಕ ಬಡ ವರ್ಗದವರ ಜೀವನ ಕುರಿತಂತೆ ಲಘುವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಗ್ಧರಿಗೆ ಮಾಡಿದ ದ್ರೋಹ: ರಾಜಕೀಯ ಪ್ರಭಾವ ಬಳಸಿ ದೇಶದ ಲಕ್ಷಾಂತರ ಕೋಟಿ ಆಸ್ತಿಯನ್ನು ಭೂ ಹಗರಣಗಳ ಮೂಲಕ ಕಾಂಗ್ರೆಸ್ ಅಧಿನಾಯಕಿ ಕುಟುಂಬದ ಪಾಲಾಗಿರುವುದು ರಾಮ ರಾಜ್ಯದ ಕನಸು ಹೊತ್ತಿರುವ ಮುಗ್ಧ ಜನರಿಗೆ ಮಾಡಿದ ದ್ರೋಹವಾಗಿದೆ ಎಂದರು.
ನಗರಸಭೆ ಸದಸ್ಯೆ ಕೆ.ಆರ್. ಲೀಲಾ ಮಾತನಾಡಿ, ಭೂಮಿಯಿಂದ ಆಕಾಶದವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರೆ ಇದರಲ್ಲಿ ಕಾಂಗ್ರೆಸ್ಸಿಗರ ಕೊಡುಗೆ ಅಪಾರವಾದುದು ಎಂದು ಟೀಕಿಸಿದ ಅವರು, ದೇಶ ಆಳಲು ಜನ ಮತ ನೀಡಿದರೆ ಅಡುಗೆ ಅನಿಲ, ಅಕ್ಕಿ, ಬೇಳೆ ಕಾಳು, ಪೆಟ್ರೋಲ್ ಡೀಸೆಲ್ ಸೇರಿದಂತೆ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ನೋಡಲು ಜನ ಕಾತರರಾಗಿದ್ದಾರೆ. ಈ ಸಂಬಂಧ ಒಂದು ಓಟು ಒಂದು ನೋಟು ಅಭಿಯಾನದಡಿ ಜನಸಾಮಾನ್ಯರತ್ತ ಮನೆಗಳಿಗೆ ಬಿಜೆಪಿ ತೆರಳಿದಾಗ ವಿಶ್ವಾಸಾರ್ಹತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಶಕ್ತಿ ಕೇದ್ರದ ಮುಖಂಡ ವೆಂಕಟೇಶ್, ಬೋಜಮಲ್ಲಪ್ಪ ಶೆಟ್ಟಿ, ಉಷಾ, ತಾರಾಮಣಿ, ಮಂಜುನಾಥ್, ಕುಮಾರ್, ಸುನೀಲ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

