ಚಿಕ್ಕಮಗಳೂರು

ಗಾಂಜಾ ಪ್ರಕರಣ ಕ್ರಮ ಕೈಗೊಳ್ಳದ ಪೊಲೀಸರು: ಆರೋಪ

Published On :

ಚಿಕ್ಕಮಗಳೂರು: ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಾನೂನು ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿದ್ದರೂ ನಾಲ್ವರು ಪೊಲೀಸರು ಸೇರಿದಂತೆ ಒಟ್ಟಾರೆ 8 ಜನರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಅಂಗವಿಕಲರ ಸಂಘದ ರಾಜ್ಯ ಉಪಾಧ್ಯಕ್ಷ ಕಿರಣ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದ ಸುಂದ್ರೇಶ್ ಗೌಡ ಎಂಬ ವ್ಯಕ್ತಿಯ ಮನೆಗೆ 2010ರ ನವೆಂಬರ್ 27ರಂದು ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ತೆರಳಿದ ನಾಲ್ಕು ಜನ ಪೊಲೀಸರು ಬಾಗಿಲು ಬಡಿದು ಬಲವಂತವಾಗಿ ಏಳಿಸಿ ಗಾಂಜಾ ಮಾರುತ್ತಿರುವುದಾಗಿ ಒಪ್ಪಿಕೋ ಎಂದು ಹೆದರಿಸಿದ್ದಲ್ಲದೆ ಪೊಲೀಸ್ ಮೆಸ್‌ಗೆ ಕರೆತಂದು ರಾತ್ರಿಯಿಡೀ ಹಿಂಸೆ ನೀಡಿದ್ದರು ಎಂದು ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಮಂಗಳವಾರ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಮಾರನೇ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿಚಾರ ತಿಳಿದು ಅಮಾಯಕ ಸುಂದ್ರೇಶ್‌ಗೌಡರನು ಬಿಡುಗಡೆ ಮಾಡಿ ನಾಲ್ವರು ಪೊಲೀಸರನು ಅಮಾನತುಗೊಳಿಸಿದ್ದರು. ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದ ಹಿನೆಲೆಯಲ್ಲಿ ಸುಂದ್ರೇಶಗೌಡರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ನಂತರ ಎ.ಎಸ್.ಐ.ಗಳಾದ ಚಂದ್ರು, ನಾರಾಯಣ, ಟೌನ್ ಸ್ಟೇಷನ್ ಪಿ.ಸಿ. ನವೀನ್ ಮತ್ತು ಮಲ್ಲಂದೂರು ಠಾಣೆಯ ಪಿ.ಸಿ. ಶಂಕರ್ ನಾಯ್ಕ್ ಎಂಬುವವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಬಂಧಿಸಲು ಒತ್ತಾಯ: ಆದರೆ, ಉಚ್ಛ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿಯನು ವಜಾಗೊಳಿಸಿದೆ. ಆ ನಂತರ ಚಿಕ್ಕಮಗಳೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಈ ನಾಲ್ವರು ಪೊಲೀಸರೂ ಸೇರಿದಂತೆ ಸುಳ್ಳು ಸಾಕ್ಷಿ ಹೇಳಲು ಮುಂದಾಗಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿ ಜಾಮೀನು ರಹಿತ ವಾರೆಂಟನು ಜಾರಿ ಮಾಡಿದೆ. ಆದರೂ ಸಹ ಆರೋಪಿಗಳು ನಗರದಲ್ಲಿ ರಾಜೋರೋಷವಾಗಿ ತಿರುಗಾಡುತ್ತಿದ್ದು, ಕೂಡಲೇ ಇವರನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ನಾಲ್ವರು ಪೊಲೀಸರು ಮತ್ತು ನಗರದ ಆದಿಬೂತಪ್ಪ ಬೀದಿಯ ರತ, ಸ್ವಾಮಿ, ಕೆ.ಆರ್. ಪೇಟೆಯ ಚಂದ್ರೇಶ್, ಚಂದನ್ ಅವರನು ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇಲ್ಲದಿದ್ದಲ್ಲಿ ನಗರದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.