ಚಾಲನಾ ಪತ್ರ ನೀಡಲು ವಿಳಂಬ: ದೂರು
ಕ.ಪ್ರ.ವಾರ್ತೆ, ಮೂಡಿಗೆರೆ, ಫೆ.17
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲನಾ ಪತ್ರಕ್ಕಾಗಿ ಶುಲ್ಕ ಪಾವತಿಸಿ, ನೀತಿ, ನಿಯಮಗಳನ್ನು ಪಾಲಿಸಿದರೂ ಚಾಲನಾ ಪತ್ರ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಅಭ್ಯರ್ಥಿಗಳಾದ ದೇವದಾಸ್ ಹಾಗೂ ಡಿ.ಆರ್. ಸುರೇಶ್ ಸಾರಿಗೆ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಳಗೂರು ಗ್ರಾಮದ ದೇವದಾಸ್ 2013ರ ನ.16ರಂದು ಕಲಿಕಾ ಲೈಸೆನ್ಸ್ ಪಡೆದು ಡಿ.23 ರಂದು ಮೂಡಿಗೆರೆ ಶಿಬಿರದಲ್ಲಿ ಚಾಲನಾ ಪರೀಕ್ಷೆ ವೇಳೆ ವಾಹನ ನಿರೀಕ್ಷಕರ ಎದುರು ಮೋಟಾರ್ ಸೈಕಲ್, ಲಘು ವಾಹನಗಳಿಗೆ ಪರೀಕ್ಷೆ ನೀಡಿ ಉತ್ತೀರ್ಣ ಆಗಿದ್ದರೂ ಚಾಲನಾ ಪತ್ರ ವಿತರಿಸಿಲ್ಲ.
ಸಕಾಲದನ್ವಯ ಪರೀಕ್ಷೆಗೆ ಹಾಜರಾದ 30 ದಿನಗಳೊಳಗೆ ಚಾಲನಾ ಪತ್ರ ಅಭ್ಯರ್ಥಿಯ ವಿಳಾಸಕ್ಕೆ ಸ್ಪೀಡ್ಪೋಸ್ಟ್ನಲ್ಲಿ ಕಳುಹಿಸುವುದು ಕಡ್ಡಾಯವಾಗಿದ್ದರೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನಿರಂತರ ಸಮಸ್ಯೆ: ದುರ್ಗದಹಳ್ಳಿ ಸುರೇಶ್ 2013ರ ಆ.23 ರಂದು ಪರೀಕ್ಷೆ ನೀಡಿದ ಬಳಿಕ ಸಾರಿಗೆ ಅಧಿಕಾರಿಗಳು ನಿಮ್ಮ ಅರ್ಜಿ ಬಂದಿಲ್ಲ ಎಂದಿದ್ದರು. ಬಳಿಕ ಇದೇ ಜ.6ರಂದು ಚಿಕ್ಕಮಗಳೂರಿನಲ್ಲಿ ಲಘು ವಾಹನಗಳ ಚಾಲನಾ ಪರೀಕ್ಷೆ ಪಡೆದಿದ್ದರೂ ಚಾಲನಾ ಪತ್ರ ನೀಡಿಲ್ಲ.
ಈ ಸಂಬಂಧ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಿಚಾರಿಸಿದಾಗ ಪರೀಕ್ಷೆಯಲ್ಲಿ ಉತ್ತೀರ್ಣ ಎಂದು ಬರೆದಿರುವುದು ತದ ನಂತರ ಮೋಟಾರು ವಾಹನ ನಿರೀಕ್ಷಕರು ಈ ವ್ಯಕ್ತಿ ಪರೀಕ್ಷೆ ನೀಡಿಲ್ಲ ಎಂದು ಮರಳಿ 3ನೇ ಬಾರಿ ಕಚೇರಿಗೆ ಕಳುಹಿಸಿ ಪರೀಕ್ಷೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ನಿರಂತರ ಸಮಸ್ಯೆ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸಾರಿಗೆ ಆಯುಕ್ತರಿಗೆ ದೂರು: ಈ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಿದರೆ ಸಂಬಂಧವಿಲ್ಲ ಎಂದು ವರ್ತಿಸುತ್ತಿದ್ದಾರೆ.
ಅಭ್ಯರ್ಥಿಗಳು ಅಪಾರ ಪ್ರಮಾಣದ ಹಣ ವ್ಯಯಿಸಿ 2 ರಿಂದ 3 ಬಾರಿ ಪರೀಕ್ಷೆಗೆ ಹಾಜರಾದರೂ ಅಧಿಕಾರಿಗಳು ಎಸಗುವ ತಪ್ಪಿಗೆ ಬಲಿಯಾಗಬೇಕಾಗಿದೆ.
ಕಚೇರಿಯಲ್ಲಿ ಅರ್ಜಿಗಳು ಕಳೆಯುವುದು, ಸಹಿ ಮಾಡದಿರುವುದು, ಗಣಕ ಯಂತ್ರದಲ್ಲಿ ಫಲಿತಾಂಶ ನೀಡದಿರುವುದು, ಚಾಲನಾ ಪತ್ರ ನೀಡದಿರುವುದರಿಂದ ಸಾರಿಗೆ ಆಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

