ಚಿಕ್ಕಮಗಳೂರು

ನಾರಿ ಸ್ತ್ರೀ ಕುಲಕ್ಕೆ ಆಭರಣ

Published On :

ಚಿಕ್ಕಮಗಳೂರು: ಹೆಣ್ಣಿಗೆ ಗುಣವೇ ಶೃಂಗಾರ.  ಜನನಿ ಜನ್ಮಭೂಮಿಯಷ್ಟೇ ಪವಿತ್ರ.  ಮಹಿಳೆಯ ವ್ಯಾಪ್ತಿ ಕ್ಷೇತ್ರ ಇಂದು ವ್ಯಾಪಕವಾಗಿ ವಿಸ್ತಾರವಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ವನಜಾ ಅಶೋಕ್  ಹೇಳಿದರು.
ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಭಾನುವಾರ ನಡೆದ ಅಕ್ಕಮಹಾದೇವಿ ಮಹಿಳಾ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೇಶವನ್ನೆ ಆಳಬಲ್ಲ ಹಾಗೂ 21ನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹೀಗೆ ಪ್ರತಿ ಕ್ಷೇತ್ರದಲ್ಲಿ ತನ್ನ  ಛಾಪು ಮೂಡಿಸಿದ್ದಾಳೆಂದ ಅವರು, ಅಂತರಿಕ್ಷಯಾನ ಸಾಧನೆ ಮಾಡಿದ ಸುನಿತಾ ವಿಲಿಯಮ್ಸ್‌ಳನ್ನು ಉದಾಹರಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಕಾರ್ಯದರ್ಶಿ ಹೇಮಲತಾ, ಖಜಾಂಚಿ ಯಮುನಾ ಸಿ.ಶೆಟ್ಟಿ, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಹ ಖಜಾಂಚಿ ರೇಖಾ ಉಮಾಶಂಕರ್, ವನಜಾಕ್ಷಮ್ಮ, ಮಂಜುಳಾ ಮಹೇಶ್, ನಾಗಮಣಿ,  ಮೀನಾ ನಟರಾಜ್, ಮಂಜುಳಾ, ಪ್ರಸಾದಿನಿ ಚಂದ್ರಶೇಖರ್  ಉಪಸ್ಥಿತರಿದ್ದರು. ಖಜಾಂಚಿ ಯಮುನಾ ಸಿ.ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಸುಧಾ ರಾಜಶೇಖರ್ ಪ್ರಾರ್ಥಿಸಿದರು. ಮಧುಮತಿ ಶಿವಕುಮಾರ್ ಸ್ವಾಗತಿಸಿದರು. ಭಾರತಿ ಶಿವರುದ್ರಪ್ಪ ನಿರೂಪಿಸಿದರು. ವನಮಾಲಾ ಮೃತ್ಯುಂಜಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.