ಚಿಕ್ಕಮಗಳೂರು

ನಗರದಲ್ಲಿ ರಾಷ್ಟ್ರೀಯ ಟಿಎಸ್‌ಡಿ ರ್ಯಾಲಿ 8ರಂದು

Published On :

ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ.4
ರಾಷ್ಟ್ರೀಯ ಮೊದಲನೆಯ ಹಂತದ ಟಿಎಸ್‌ಡಿ ರ್ಯಾಲಿ ಜೂ.8ರಂದು ಮೋಟಾರ್ ಸ್ಫೋರ್ಟ್ಸ್ ಸಹಯೋಗದೊಂದಿಗೆ ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ತಿಳಿಸಿದರು.
ಈ ರ್ಯಾಲಿಯು ಚಿಕ್ಕಮಗಳೂರು, ಜೈಪುರ, ಬೆಂಗಳೂರು, ನಾಸಿಕ್, ಕೊಯಮತ್ತೂರು, ಒಡಿಸ್ಸಾ, ಕೊಲ್ಕತ್ತಾ, ರಾಂಚಿ ಮತ್ತು ಚೆನ್ನೈನಲ್ಲಿ 9 ಹಂತದಲ್ಲಿ ನಡೆಯುತ್ತಿದೆ. ನಗರದ ಕ್ಯಾಥೋಲಿಕ್ ಕ್ಲಬ್‌ನಲ್ಲಿ ಅಂದು ಬೆಳಗ್ಗೆ 7.30 ಗಂಟೆಗೆ ರ್ಯಾಲಿ ಆರಂಭಗೊಂಡು ಹಿರೇಮಗಳೂರು, ಉದ್ದೇಬೋರನಹಳ್ಳಿ, ಕೈಮರ, ಚನ್ನಗೊಂಡನಹಳ್ಳಿ, ಜೋಳದಾಳು ಮೂಲಕ ಮಲ್ಲಂದೂರು ತಲುಪಲಿದೆ. ಅಲ್ಲಿ ಮಧ್ಯಾಹ್ನದ ಊಟ ಮುಗಿದ ಬಳಿಕ ಜಾಗರ, ಆವತಿ, ಗುಲ್ಲನ್ ಪೇಟೆ ಮೂಲಕ ಕ್ಯಾಥೋಲಿಕ್ ಕ್ಲಬ್ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಈ ರ್ಯಾಲಿಯಲ್ಲಿ ಲೋಕಲ್ ಕ್ಲಾಸ್ 112 ಕಿ.ಮೀ. ದೂರ ಕ್ರಮಿಸಲಿದೆ. ಎಕ್ಸ್ ಫರ್ಟ್ ವಿಭಾಗ 180 ಕಿ.ಮೀ. ಆಗಲಿದೆ. ಸ್ಥಳೀಯ ವಿಭಾಗಕ್ಕೆ 15 ವಾಹನಗಳನ್ನು ಭಾಗವಹಿಸುತ್ತಿದೆ. ಎಕ್ಸ್‌ಪರ್ಟ್ ವಿಭಾಗದಲ್ಲಿ 25 ವಾಹನಗಳು ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.
ಬೆಂಗಳೂರಿನ ಸತೀಶ್ ಗೋಪಾಲ್ ಕೃಷ್ಣ, ಸವೇರ ಡಿಸೋಜ, ಇರೋಡ್‌ನ ಕಾರ್ತಿಕ್ ಮಾರುತಿ ಶಂಕರಾನಂದ ತಂಡ, ಗಣೇಶಮೂರ್ತಿ, ನಾಗರಾಜ್, ಬೆಂಗಳೂರಿನ ಚಿದಾನಂದಮೂರ್ತಿ, ಸುಜಿತ್ ಕುಮಾರ್, ಚಿಕ್ಕಮಗಳೂರಿನ ಜಿ.ಎಂ. ಶ್ರೀಕಾಂತ್ ಮತ್ತು ತಂಡ, ಬೆಂಗಳೂರಿನ ಚಂದ್ರಶೇಖರ ಮತ್ತು ತಂಡ, ಚಿಕ್ಕಮಗಳೂರಿನ ದಿಲೀಪ್ ಮತ್ತು ತಂಡ ಭಾಗವಹಿಸಲಿದೆ ಎಂದು ತಿಳಿಸಿದರು.
ಟಾಟಾ ಮೋಟಾರ್ ಉತ್ಪಾದಕ ಸಂಸ್ಥೆಯಿಂದ ವಾಹನಗಳು ಭಾಗವಹಿಸಲಿವೆ. ರ್ಯಾಲಿಯು ರಸ್ತೆ ಮಾರ್ಗ ಗುಪ್ತವಾಗಿದ್ದು, ಹಳ್ಳಿಯ ಸಂಪೂರ್ಣ ಮಾಹಿತಿ ನೀಡಲಾಗದು. ಸ್ಥಳೀಯ ವಿಭಾಗದಲ್ಲಿ ಮಹಿಳಾ ವರ್ಗ ಮತ್ತು ದಂಪತಿ ವರ್ಗಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಮೋಟಾರ್ ಸ್ಫೋರ್ಟ್ಸ್ ಉಪಾಧ್ಯಕ್ಷ ಫಾರೂಕ್ ಅಹ್ಮದ್, ಕಾರ್ಯದರ್ಶಿ ಮಾಚಯ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಭಿಜಿತ್ ಪೈ, ದಿಲೀಪ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.