ಸಹಕಾರವೇ ಸಂಘದ ಜೀವಾಳ
ತರೀಕೆರೆ: ಪರಸ್ಪರ ಸಹಕಾರವೇ ಸಂಘದ ಅಭಿವೃದ್ಧಿಗೆ ಜೀವಾಳ ಎಂದು ತಾಲೂಕು ಬಚಾವೋ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಎನ್.ರಾಜು ತಿಳಿಸಿದರು.
ಗುರುವಾರ, ಪಟ್ಟಣದ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಟಿ.ಎಂ.ವಿಜಯಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚು ಅನುದಾನ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ತಾವು ಸಂಪೂರ್ಣ ಸಹಕರಿಸುವುದಾಗಿ ತಿಳಿಸಿದ ಅವರು ಶಾಶ್ವತವಾಗಿ ಉಳಿಯುವಂತಹ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ಪುರಸಭಾ ಸದಸ್ಯ, ಸಹಕಾರ ಸಂಘದ ನಿರ್ದೇಶಕ ಪ್ರಕಾಶ್ ವರ್ಮ ಮಾತನಾಡಿ ಸಾಮಾಜಿಕ ನ್ಯಾಯದಂತೆ ವಿಜಯಕುಮಾರ್ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಹೇಳಿದರು. ಮುಖಂಡ ಆನಂದ್ ಮಾತನಾಡಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಸಂಘವನ್ನು ಹೆಚ್ಚು ಲಾಭದತ್ತ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಟಿ.ಎಂ.ವಿಜಯಕುಮಾರ್ ಮಾತನಾಡಿ ಸಂಘದಲ್ಲಿ 1950 ಶೇರುದಾರರು ಇದ್ದು 31.82 ಲಕ್ಷ ಶೇರುದಾರರ ಹಣ ಇದೆ. ಸಂಘದಲ್ಲಿ 7 ಲಕ್ಷ ಡಿಪಾಸಿಟ್ ಇದ್ದು, ಸಂಘಕ್ಕೆ 6.96 ಸಾವಿರ ಲಾಭ ಬಂದಿದೆ ಎಂದು ತಿಳಿಸಿದರು.
ಸಂಘಕ್ಕೆ ಬಿ. ಗ್ರೇಡ್ ಸ್ಥಾನ ದೊರಕಿದೆ. ಎಲ್ಲರ ಸಹಕಾರದಿಂದ ಸಂಘವನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಯುವ ಕವಿ ದಾದಾಪೀರ್, ಕನ್ನಡಶ್ರೀ ಬಿ.ಎಸ್.ಭಗವಾನ್, ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ, ಎಆರ್ಕೆ ಶ್ರೀನಿವಾಸ್ ಮತ್ತಿತರರು ಮಾತನಾಡಿದರು. ನಿರ್ದೇಶಕ ರಾಮಸ್ವಾಮಿ, ಯತಿರಾಜ್, ರವಿಕುಮಾರ್ ಎಚ್.ಚಂದ್ರಪ್ಪ ಸಿಪಿಐ ಬಸವರಾಜ್, ಸಂಘದ ಸದಸ್ಯರು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

