ಲಬಾಬಿನ್ ಮಸೀದಿಯಿಂದ 4 ಲಕ್ಷ ಆರ್ಥಿಕ ನೆರವು ವಿತರಣೆ
ಚಿಕ್ಕಮಗಳೂರು: ನಗರದ ಲಬಾಬಿನ್ ಮಸೀದಿ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಅಶಕ್ತರಿಗೆ 4 ಲಕ್ಷ ಅರ್ಥಿಕ ನೆರವನ್ನು ಸಮಿತಿ ಅಧ್ಯಕ್ಷ ಆರ್.ಎ. ಸಲೀಂ ವಿತರಿಸಿದರು.
ಎಂ.ಜಿ. ರಸ್ತೆಯ ತಾಜಿರಾನ್ ಶಾದಿಮಹಲ್ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಣ ಬದುಕಿನಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು. ಶಿಕ್ಷಣಕ್ಕೆ ಸಮಾಜ, ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ. ಮಸೀದಿ ಸಮಿತಿ ಹಲವು ವರ್ಷಗಳಿಂದ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಪಡೆದವರನ್ನು ಗೌರವಿಸಲಾಗುತ್ತಿದೆ. 270 ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ. ಎಲ್. ವಿಜಯಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ತಮ್ಮ ಹಕ್ಕುಗಳನ್ನೆಲ್ಲ ಪಡೆಯಬಹುದು. ಪಾಕಿಸ್ತಾನದ ಯುವತಿ ಮಲಾಲ ಹೋರಾಟ ಇಂದಿನ ಯುವ ಜನತೆಗೆ ಮಾರ್ಗದರ್ಶಿ ಎಂದು ಹೇಳಿದರು.
ಬೆಂಗಳೂರಿನ ಅಂಜುಮನ್-ಎ- ಖುದ್ದಾಮುಲ್ ಮುಸ್ಲಿಮೀನ್ ಅಧ್ಯಕ್ಷ ಮಸೂದ್ ಅಬ್ದುಲ್ ಖಾದರ್ ಮಾತನಾಡಿದರು. ಲಬಾಬಿನ್ ಮಸೀದಿ ಸಮಿತಿಯ ಕಾರ್ಯದರ್ಶಿ ಮಜರ್ ಅಹಮ್ದ್, ಖಜಾಂಚಿ ಆರ್.ಕೆ. ಮಹಮ್ಮದ್ ಹುಸೇನ್, ಉಪಾಧ್ಯಕ್ಷ ಅತೀಕ್ ಅಹ್ಮದ್, ಮಹಮ್ಮದ್ ಷೇಕ್ ವೇದಿಕೆಯಲ್ಲಿದ್ದರು. ಮೌಲಾನ ಮಜ್ಹಮಿಲ್ ಕುರಾನ್ ಪಠಿಸಿದರು. ಮೌಲಾನ ರಾಹಿಖಾಸಿಮಿ ವರದಿ ಮಂಡಿಸಿದರು. ಕೆ. ಮಹಮ್ಮದ್ ಜಾಫರ್ ಸ್ವಾಗತಿಸಿದರು. ಮದರಸದ ಮುಖ್ಯಸ್ಥ ಖ್ವಾಜಾಮೊಹಿದ್ದೀನ್ ದುವಾ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

