ಧ್ವಜಕಟ್ಟೆ ಮರು ಸ್ಥಾಪನೆಗೆ ಶಿವಶಂಕರ್ ಆಗ್ರಹ
ಚಿಕ್ಕಮಗಳೂರು: ತಾಲೂಕಿನ ಆಲ್ದೂರಿನಲ್ಲಿ ಕೆಡವಿರುವ ಧ್ವಜಕಟ್ಟೆಯನ್ನು ಮರು ಸ್ಥಾಪಿಸಬೇಕೆಂದು ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಬಿ.ಎ. ಶಿವಶಂಕರ್ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಧ್ವಜಕಟ್ಟೆಯನ್ನು ತೆರವುಗೊಳಿಸಿರುವ ಜಿಲ್ಲಾಡಳಿತ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಆಲ್ದೂರಿನ ಧ್ವಜಕಟ್ಟೆ ಹಿಂದೂ ಸಮಾಜಕ್ಕೆ ಶ್ರದ್ಧೆಯ ಕೇಂದ್ರವಾಗಿದ್ದು, ಹಲವಾರು ಬಾರಿ ತೆಗೆಸಲು ಪ್ರಯತ್ನಪಟ್ಟಾಗಲೆಲ್ಲ ಅನಾವಶ್ಯಕ ಉದ್ವಿಗ್ನತೆ ಆಲ್ದೂರು ಭಾಗದ ಜನತೆಯಲ್ಲಿ ಉಂಟಾಗುತ್ತಿದೆ. ಈ ವಿಷಯ ತಿಳಿದಿದ್ದರೂ ಸಹ ಜಿಲ್ಲಾಡಳಿತ ಈ ಸಂದರ್ಭದಲ್ಲಿ ಧ್ವಜಕಟ್ಟೆ ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
ಸ್ವಾತಂತ್ರೋತ್ಸವದ ಐವತ್ತನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಸ್ಥಾಪಿಸಲಾಗಿದ್ದ ಧ್ವಜಕಟ್ಟೆ ಗೌರವದ ಸಂಕೇತವಾಗಿದೆ. ಆ ವೃತ್ತದಲ್ಲಿ ಮಸೀದಿ ಇದೆ ಎಂಬ ಕಾರಣಕ್ಕೆ ವಿವಿಧ ಸಂಘಟನೆಗಳನ್ನು ಪ್ರಚೋದಿಸಿ ಇತ್ತೀಚಿನ ದಿನಗಳಲ್ಲಿ ವಿರೋಧಿಸುತ್ತಾ ಬಂದಿದ್ದು, ಇದೇ ವೃತ್ತದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಮದೀನಾ ವೃತ್ತ ಎಂದು ಹೆಸರಿಸಿದ್ದು ಕೂಡ ಹಿಂದೆ ವಿವಾದವಾಗಿತ್ತು. ಇದೇ ವೃತ್ತದಲ್ಲಿ ಅರೇಕಲ್ ಜಟಕರಾಯ ಸ್ವಾಮಿ ದೇವಸ್ಥಾನವೂ ಕೂಡ ಇದ್ದು, ಈ ಹೆಸರಿಡಲು ವಿರೋಧವಾಗಿತ್ತು ಎಂಬ ಕಾರಣಕ್ಕೆ ಅಂದಿನಿಂದ ನಿರಂತರವಾಗಿ ಕುಟಿಲ ನೀತಿಯನ್ನು ಅನುಸರಿಸುತ್ತಾ ಬರಲಾಗಿತ್ತು ಎಂದು ಆರೋಪಿಸಿದರು.
ಆಲ್ದೂರಿನಲ್ಲಿ ಪದೇ ಪದೆ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಕಳೆದ ಒಂದು ವರ್ಷದಿಂದ ಹಾಕುತ್ತಾ ಬರಲಾಗುತ್ತಿದೆ. ಧ್ವಜಕಟ್ಟೆ ತೆರವುಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು. ಇದೇ ಜಾಗದಲ್ಲಿ ಗೌರವಯುತವಾಗಿ ಧ್ವಜಕಟ್ಟೆಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಆರ್.ಡಿ. ಮಹೇಂದ್ರ ಹಾಗೂ ವಿಶ್ವಹಿಂದೂ ಪರಿಷತ್ ಜಿಲ್ಲಾ ಖಜಾಂಚಿ ಯೋಗೀಶ್ ರಾಜ್ ಅರಸ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

