ಚಿಕ್ಕಮಗಳೂರು

ಧರೆಗುರುಳಿದ ಬಾಳೆ

Published On :

ನರಸಿಂಹರಾಜಪುರ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೇಂದ್ರ ಬಾಳೆ ಉರುಳಿ ಬಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಮಂಗಳವಾರ ಸಂಜೆ 7 ಗಂಟೆಯಿಂದ 10 ಗಂಟೆಯವರೆಗೂ ಗುಡುಗು, ಮಿಂಚು ಗಾಳಿಯೊಂದಿಗೆ ಸುರಿದ ಭಾರಿ  ಮಳೆಗೆ ತಾಲೂಕಿನ ರಾವೂರು ಗ್ರಾಮದ ತಿರುಪತಿ ಮಂಜು ಎಂಬುವರ ರಬ್ಬರ್ ತೋಟದ ಒಳಗೆ ನೆಟ್ಟಿದ್ದ 3 ಸಾವಿರ ನೇಂದ್ರ ಬಾಳೆ ಕೊನೆ ಸಹಿತ ಉರುಳಿ ಬಿದ್ದಿದ್ದು, ಲಕ್ಷಾಂತರ ರು. ನಷ್ಟ ಉಂಟಾಗಿದೆ.  ಹಿಳುವಳಿ ಗ್ರಾಮದ ಸಿಜು ಎಂಬುವರ ತೋಟದ ನೇಂದ್ರ ಬಾಳೆ ಸಾಲು, ಸಾಲಾಗಿ ಉರುಳಿ ಬಿದ್ದು, ನಷ್ಚ ಉಂಟಾಗಿದೆ. ಕೆಲವು ಗ್ರಾಮಗಳಲ್ಲಿ ರಬ್ಬರ್ ಮರಗಳೂ ಉರುಳಿ ಬಿದ್ದಿವೆ.
ಜೈಲ್ ರಸ್ತೆಯಲ್ಲಿದ್ದ ಬಿಎಸ್ಸೆನ್ನೆಲ್ ಕೇಂದ್ರದ ಸಮೀಪ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಒಣಗಿದ ಮರವೊಂದು ಬಿದ್ದು, ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಗಾಳಿಯಿಂದಾಗಿ ಗ್ರಾಮಾಂತರ ರಸ್ತೆಗಳಲ್ಲಿ ಬಿದಿರು, ಮರದ ಗೆಲ್ಲುಗಳು ಉರುಳಿ ಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.