ಚಿಕ್ಕಮಗಳೂರು

ಹೆಬ್ಬೆ ತಿರುವು ಯೋಜನೆಗೆ ಪಕ್ಷಾತೀತ ಹೋರಾಟ: ದತ್ತ

Published On :

ಕ.ಪ್ರ.ವಾರ್ತೆ, ಕಡೂರು, ಮೇ 3
ಮಹತ್ವದ ಹೆಬ್ಬೆ ತಿರುವು ಯೋಜನೆಯ ಅಂದಾಜು ವೆಚ್ಚ 294 ಕೋಟಿಗೆ ಏರಿಕೆಯಾಗುತ್ತಿದೆ. ಯೋಜನೆ ಜಾರಿಗೆ ಹುಲಿ ಸಂರಕ್ಷಿತ ಹಾಗೂ ಅರಣ್ಯ ಪ್ರದೇಶ ಎಂಬ ನೆಪದಲ್ಲಿ ವಿಳಂಬ ಆಗುತ್ತಿರುವುದರ ವಿರುದ್ಧ ಯೋಜನೆ ಜಾರಿಗೆ ಪಕ್ಷಾತೀತವಾಗಿ ಎಲ್ಲರೊಂದಿಗೆ ಕೈ ಜೋಡಿಸಿ ಹೋರಾಟ ಮಾಡಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, 1998 ರಿಂದಲೂ ಹೆಬ್ಬೆ ಯೋಜನೆ ಜಾರಿಗಾಗಿ ಹಲವಾರು ಮಹನೀಯರು, ಶಾಸಕರು ಹೋರಾಡುತ್ತಿದ್ದಾರೆ. ಕಾಲಾನಂತರ ಇದು ಹೋರಾಟದ ರೂಪ ಪಡೆದು ಬರುವ ಮೂಲಕ ಸರ್ಕಾರದ ಮಟ್ಟದಲ್ಲಿ ಹೆಬ್ಬೆ ಜಲ ತಿರುವು ಯೋಜನೆಯಾಗಿ ರೂಪುಗೊಂಡಿತು ಎಂದರು.
ಆರಂಭದಲ್ಲಿ ಕೇವಲ 80 ಕೋಟಿ ಅಂದಾಜು ವೆಚ್ಚದ ಹೆಬ್ಬೆ ತಿರುವು ಯೋಜನೆಯನ್ನು ತಾವು ಅಂದಿನ ಜೆಡಿಎಸ್ ಸರ್ಕಾರದ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಎ ಸ್ಕೀಂನಲ್ಲಿದ್ದ ಈ ಯೋಜನೆಯನ್ನು ಬಿ ಸ್ಕೀಂಗೆ ಸೇರಿಸುವಲ್ಲಿ ಯಶಸ್ವಿಯಾದೆವು. ಆದರೆ ಮುಂದೆ ಈ ಯೋಜನೆಯ ಸಾಧಕ- ಬಾಧಕಗಳ ಚರ್ಚೆ ನೆಡೆಯದೇ ಇದು ಕೇವಲ ಜನರನ್ನು ರಂಜಿಸುವ ವಿಷಯವಾಗಿ ಪರಿಣಮಿಸಿರುವುದು ವಿಷಾದನೀಯ ಎಂದರು.
ಕಳೆದ 2010ರ ಅಕ್ಟೋಬರ್ನಲ್ಲಿ 140 ಕೋಟಿ ಮೊತ್ತದ ಈ ಯೋಜನೆಯ ಯೋಜನಾ ವರದಿಗೆ ಸರ್ಕಾರದ ತಾತ್ವಿಕ ಅನುಮೋದನೆ ದೊರೆಯಿತು. ಸದರಿ ಯೋಜನೆಗೆ ಬೇಕಾಗುವ 1.45 ಟಿಎಂಸಿ ನೀರನ್ನು ಕೃಷ್ಣಾ ಕೊಳ್ಳದ ನೀರಿನ ಹಂಚಿಕೆಯಲ್ಲಿ ಲಭ್ಯ ಮಾಡಿಕೊಳ್ಳಲಾಯಿತು.
ಆರಂಭದಲ್ಲಿ ಕೇವಲ 80 ಕೋಟಿ ಇದ್ದ ಈ ಯೋಜನೆ ಇಂದು 294 ಕೋಟಿಗೆ ಏರಿದೆ. ಆದರೆ, ಯೋಜನೆ ಜಾರಿಗೆ ಈ ಜಾಗದಲ್ಲಿ ಹುಲಿ ಸಂರಕ್ಷಿತ ಪ್ರದೇಶ, ಖಾಸಗಿ ಕಾಫಿ ತೋಟ ಮತ್ತು ನೂರಾರು ಎಕರೆ ಅರಣ್ಯ ಪ್ರದೇಶವಿದೆ ಎಂಬ ನೆಪದ ಜೊತೆ ಪರಿಸರವಾದಿಗಳ ವಿರೋಧ ಕೂಡ ಹೆಬ್ಬೆ ತಿರುವು ಯೋಜನೆ ಜಾರಿಗೆ ಅಡ್ಡಗಾಲಾಗಿದೆ. ಮತ್ತೊಂದು ಸಂಪರ್ಕ ಕಾಲುವೆ ನಿರ್ಮಿಸಲು ಯೋಜನೆಯಲ್ಲಿ ಅಳವಡಿಸಿಕೊಂಡು ಹೊಸ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂಬ ಕಾರಣದಿಂದ ಯೋಜನೆ ಜಾರಿ ಮುಂದಕ್ಕೆ ಹೋಗಿದೆ ಎಂದರು.
ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಪ್ರಸಸ್ನ, ಎನ್. ಇಮಾಂ, ಉಮೇಶ್, ತಮ್ಮಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.