ಪಿಯು ಫಲಿತಾಂಶ: ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಗುರುವಾರ ವೆಬ್ಸೈಟ್ನಲ್ಲಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ನಗರದ ವಿವಿಧ ವೆಬ್ಸೈಟ್ ಕೇಂದ್ರಗಳಲ್ಲಿ ಫಲಿತಾಂಶ ವೀಕ್ಷಿಸಿದರು. ಶುಕ್ರವಾರ ಬೆಳಗ್ಗೆ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.
ಎಂಇಎಸ್: ನಗರದ ಸುಂದರಮ್ಮ ಶಂಕರಮೂರ್ತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಂ.ಎಲ್. ಧನುಷ್ 600ಕ್ಕೆ 586 ಅಂಕ ಪಡೆದುಕೊಂಡಿದ್ದಾನೆ. ಅದೇ ಕಾಲೇಜಿನ ಎಸ್.ಆರ್. ಕಾರ್ತಿಕ್ 585, ವಾಣಿಜ್ಯ ವಿಭಾಗದಲ್ಲಿ ಹರ್ಷಿತ ವಿ. ಶರ್ಮಾ 600ಕ್ಕೆ 570 ಪಡೆದುಕೊಂಡಿದ್ದಾರೆ.
ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದ 258 ವಿದ್ಯಾರ್ಥಿಗಳಲ್ಲಿ 209 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ಪೈಕಿ 43 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 120, ದ್ವಿತೀಯ ಶ್ರೇಣಿಯಲ್ಲಿ 29, ತೃತೀಯ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಲೆಕ್ಕ ಶಾಸ್ತ್ರದಲ್ಲಿ 8, ವ್ಯವಹಾರ ಅಧ್ಯಯನದಲ್ಲಿ 2, ಸಂಖ್ಯಾ ಶಾಸ್ತ್ರದಲ್ಲಿ 2, ಗಣಿತ- 7, ರಸಾಯನ ಶಾಸ್ತ್ರದಲ್ಲಿ 3, ಗಣಕ ಶಾಸ್ತ್ರದಲ್ಲಿ 2 ಹಾಗೂ ಜೀವ ಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಬಿಜಿಎಸ್: ನಗರದ ಬಿಜಿಎಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 95.45 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಶೇ. 94.11, ವಾಣಿಜ್ಯ ಶೇ.100 ಫಲಿತಾಂಶ ಬಂದಿದ್ದು, ಪರೀಕ್ಷೆ ತೆಗೆದುಕೊಂಡಿದ್ದ 44ರಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 6 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಕೆ.ಎನ್. ಅಶ್ವಿನಿ ವಿಜ್ಞಾನ ವಿಭಾಗದಲ್ಲಿ 570 ಅಂಕ ಪಡೆದುಕೊಂಡಿದ್ದಾರೆ.
ಸಾಯಿ ಏಂಜೆಲ್ಸ್: ಸಾಯಿ ಏಂಜಲ್ಸ್ ಪದವಿಪೂರ್ವ ಕಾಲೇಜಿಗೆ ಶೇ. 100 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆ ತೆಗೆದುಕೊಂಡಿದ್ದ 143 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 86 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿನಿ ಸೀಮಾ ಸಿ. ಭಟ್ 582 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ಭಾಗಮನೆ ಪ್ರಧಾನ್ 581 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ಪಾತ್ರನಾಗಿದ್ದಾನೆ.
ಗಣಿತದಲ್ಲಿ 17 ವಿದ್ಯಾರ್ಥಿಗಳು, ರಸಾಯನ ಶಾಸ್ತ್ರದಲ್ಲಿ 5, ಭೌತಶಾಸ್ತ್ರದಲ್ಲಿ 2 ಹಾಗೂ ಕಂಪ್ಯೂಟರ್ ಸೈನ್ಸ್ನಲ್ಲಿ 6, ಎಲೆಕ್ಟ್ರಾನಿಕ್ಸ್ 1, ಸೇರಿದಂತೆ ಕನ್ನಡದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಮೌಂಟೆನ್ ವ್ಯೂ ಕಾಲೇಜ್: ನಗರದ ಮೌಂಟೆನ್ವ್ಯೂ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90.43 ಫಲಿತಾಂಶ ಪಡೆದುಕೊಂಡಿದೆ.
ಈ ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 115 ವಿದ್ಯಾರ್ಥಿಗಳ ಪೈಕಿ 104 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 4 ಮಂದಿ ಅತ್ಯುನ್ನತ ಶ್ರೇಣಿ, 55 ಪ್ರಥಮ ದರ್ಜೆ, 23 ದ್ವಿತೀಯ ಶ್ರೇಣಿ, 22 ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೆ.ಸಿ. ಭಾರದ್ವಾಜ್ 539, ಮಹಮದ್ ತಮೀಮ್ ಹುಸೇನ್ 527, ವಿಜ್ಞಾನ ವಿಭಾಗದಲ್ಲಿ ಬಿ. ಪ್ರಜ್ವಲ್ 521, ಕಲಾ ವಿಭಾಗದಲ್ಲಿ ಎನ್.ಎನ್. ಅಶ್ವಿನಿ 512 ಅಂಕ ಪಡೆಯುವ ಮೂಲಕ ಈ ಕಾಲೇಜಿನಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.
ತರೀಕೆರೆ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಭದ್ರಾವತಿ ಎಸ್ಎವಿ ಕಾಲೇಜಿನ ವಿದ್ಯಾರ್ಥಿನಿಯಾದ ತರೀಕೆರೆಯ ಲಕ್ಷ್ಮಿ ಜಿ.ಚಿನಿವಾರ್ ಅವರು 574 ಅಂಕ ಗಳಿಸಿ ಶೇ.95.66 ಸಾಧನೆ ಮಾಡಿದ್ದಾರೆ.
ಶಿವಮೊಗ್ಗ ಅರಬಿಂದೋ ಪಿಯು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ತರೀಕೆರೆ ತಾಲೂಕು ಜಾವಳ್ಳಿ ವಿದ್ಯಾರ್ಥಿನಿ ಕಾಯನಾತ್ ಜೇಬ ಅವರು 554 ಅಂಕ ಗಳಿಸಿ ಶೇ.92.33 ಸಾಧನೆ ಮಾಡುವ ಮೂಲಕ ಊರಿಗೆ ಕೀರ್ತಿ ತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

