ಚಿಕ್ಕಮಗಳೂರು

ಹೀಚಹಳ್ಳೀ ಪ್ರಕರಣಕ್ಕೆ ಪೊಲೀಸರೇ ಹೊಣೆ: ಆರೋಪ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 10
ಐಟಿ ಹೆಸರಿನಲ್ಲಿ ನಕಲಿ ಅಧಿಕಾರಿಗಳಿಂದ ಶುಕ್ರವಾರ ದರೋಡೆಗೊಳಗಾದ ಹೀಚಹಳ್ಳಿ ಎಸ್ಟೇಟ್‌ಗೆ ಕೆಜಿಎಫ್ ಅಧ್ಯಕ್ಷರು ಮತ್ತು ಬೆಳೆಗಾರರ ಸಂಘದ ಸದಸ್ಯರು ಭೇಟಿ ನೀಡಿ ಮಾಲೀಕ ಪ್ರಸನ್ನಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಧೈರ್ಯ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜಿಎಫ್ ಅಧ್ಯಕ್ಷ ಬಿ.ಎಸ್. ಜಯರಾಮ್ ಅವರು, ಶುಕ್ರವಾರ ಎಸ್ಟೇಟ್‌ನಲ್ಲಿ ನಡೆದ ಘಟನೆಗೆ ಪೊಲೀಸರೇ ನೇರ ಹೊಣೆಗಾರರು. ಈ ಹಿಂದೆ 2 ಬಾರಿ ಹೀಚಹಳ್ಳಿ ಎಸ್ಟೇಟ್‌ನಲ್ಲಿ ದರೋಡೆಗೆ ಯತ್ನಿಸಲಾಗಿತ್ತು ಎಂದರು.
ಪೊಲೀಸರ ಬಗ್ಗೆ ಸಂಶಯ:  ಫೆ.28ರಂದು ಅಪರಿಚಿತರು ಕೆಲಸದಾಕೆ ಸುಶೀಲಾ ಅವರ ಮೈ ಮೇಲಿದ್ದ ಒಡವೆಗಳನ್ನು ಅಪಹರಿಸಿದ್ದಲ್ಲದೆ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
 ಈ ಬಗ್ಗೆ ಗೋಣಿಬೀಡು ಠಾಣೆಗೆ ದೂರು ನೀಡಿದ್ದರು. ಅದರ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಗಮನಿಸಿದರೆ, ಇದರಲ್ಲಿ ದರೋಡೆಕೋರರೊಂದಿಗೆ ಪೊಲೀಸರ ಪಾತ್ರ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದರು.
ಕಳ್ಳರ ಹಿಡಿಯಲು ಆಗದ ಪರಿಸ್ಥಿತಿ:  ಮಲೆನಾಡು ಭಾಗದಲ್ಲಿ ಒಂಟಿ ಮನೆಗಳೇ ಅಧಿಕವಾಗಿವೆ. ದರೋಡೆಯಂತಹ ಪ್ರಕರಣಗಳು ಆಗಾಗ್ಗೆ ನಡೆಯು ತ್ತಿದ್ದರೂ ಬೆಳೆಗಾರರು ದೂರು ನೀಡಲು ಅಂಜುತ್ತಿದ್ದಾರೆ.
 ಚುನಾವಣೆ ನೆಪದಲ್ಲಿ ಬಂದೂಕುಗಳನ್ನು ಪೊಲೀಸ್ ಠಾಣೆಗಳಲ್ಲಿ ಇಟ್ಟಿರುವುದನ್ನು ಅರಿತ ದರೋಡೆಕೋರರು ಶುಕ್ರವಾರ ಹೀಚಹಳ್ಳಿ ಎಸ್ಟೇಟ್‌ಗೆ ಅಧಿಕಾರಿಗಳ ವೇಷದಲ್ಲಿ ನುಗ್ಗಿ ದರೋಡೆ ಮಾಡಿರುವುದೇ ಒಂದು ಉದಾಹರಣೆ. ಪಟ್ಟಣದಲ್ಲೇ ಸರಣಿ ಕಳ್ಳತನ ನಡೆದರೂ ಕಳ್ಳರನ್ನು ಹಿಡಿಯಲು ಸಾಧ್ಯವಾಗದಂತ ಪರಿಸ್ಥಿತಿ ಠಾಣೆಗಳಲ್ಲಿ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ, ಸದಸ್ಯರಾದ ದೇವರಾಜು, ನಾಗೇಶ್ ಗೌಡ್ರು, ವಿಷ್ಣು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.