ಕೊಪ್ಪ ತಾಲೂಕಿಗೆ ಶೇ.85
ಕೊಪ್ಪ: ಈ ಬಾರಿ ಎಸ್ಎಸ್ಎಲ್ಸಿ ಪರಿಕ್ಷೇಯಲ್ಲಿ ತಾಲೂಕಿಗೆ ಶೇ.85ರಷ್ಟು ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಪ್ರಕಾಶ್ ತಿಳಿಸಿದ್ದಾರೆ.
ಪಟ್ಟಣ ವೆಂಕಟೇಶ್ವರ ವಿದ್ಯಾಮಂದಿರ ವಿದ್ಯಾರ್ಥಿನಿ ಸುಗಮ ಎಸ್. ನಾಯಕ್ ಹಾಗೂ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಿಷೇಕ್ ಜಿ. ರಾವ್ ಇಬ್ಬರು 609 ಅಂಕಗಳನ್ನು ಪಡೆದು ತಾಲೂಕಿನ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
ತಾಲೂಕಿನ ಆಂಗ್ಲ ಮಾಧ್ಯಮ ಶಾಲೆಗಳಾದ ಜಯಪುರದ ಬಿಜಿಎಸ್, ಬಸ್ರೀಕಟ್ಟೆ ಸದ್ಗುರು ಪ್ರೌಢಶಾಲೆ, ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ, ವೆಂಕಟೇಶ್ವರ ವಿದ್ಯಾಮಂದಿರ, ಶಾರದಾ ವಿದ್ಯಾಮಂದಿರ, ಹರಿಹರಪುರ ಅರಸು ಶಾಲೆ, ಸಿದ್ದರಮಠ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಲೋಕನಾಥಪುರ ಸರ್ಕಾರಿ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶಕ್ಕೆ ಭಾಜನವಾಗಿವೆ. ತಾಲೂಕಿನ ಎಸ್ಎಸ್ಎಲ್ಸಿ ಪರಿಕ್ಷೇಯಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡ ಸುಗಮ ಎಸ್. ನಾಯಕ್ ವಿದ್ಯಾರ್ಥಿನಿ ಸುಗಮ ಬ್ಯಾಂಕ್ ನೌಕರ ಸುಬ್ಬಣ್ಣ ಹಾಗೂ ಶಿಕ್ಷಕಿ ಚಂದ್ರಮತಿ ದಂಪತಿ ಪುತ್ರಿ. ಅಭಿಷೇಕ ಜಿ.ರಾವ್, ಗೋಪಾಲಕೃಷ್ಣ ರಾವ್ ಅವರ ಪುತ್ರ.
ತರೀಕೆರೆ ತಾಲೂಕಿಗೆ ಶೇ.81.57
ತರೀಕೆರೆ: ಈ ಸಾರಿ ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ತರೀಕೆರೆ ತಾಲೂಕು ಶೇ.81.57 ರಷ್ಟು ಫಲಿತಾಂಶ ಗಳಿಸಿದೆ.
ಪಟ್ಟಣದ ಅರುಣೋದಯ ಶಾಲೆ ವಿದ್ಯಾರ್ಥಿ ಮಲ್ಲಿಕಾರ್ಜುನ ಮತ್ತು ಅಜ್ಜಂಪುರ ವಾಸವಿ ಪ್ರೌಢಶಾಲೆ ವಿದ್ಯಾರ್ಥಿನಿ ಟಿ.ಆರ್. ಪ್ರತೀಕ್ಷಾ ಇಬ್ಬರೂ 612 ಅಂಕ ಗಳಿಸಿ ಜಿಲ್ಲೆಯಲ್ಲಿ 2ನೇ ಸ್ಥಾನ ಮತ್ತು ಸೊಕ್ಕೆ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ 611 ಅಂಕ ಗಳಿಸಿ ಜಿಲ್ಲೆಯಲ್ಲಿ 3ನೇ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್ ತಿಳಿಸಿದ್ದಾರೆ.
ಶೇ.100: ತಾಲೂಕಿನಲ್ಲಿ ಒಟ್ಟು 2267 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 1849 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.81.57 ರಷ್ಟು ಫಲಿತಾಂಶ ದೊರಕಿದೆ. ಅದರಲ್ಲಿ 825 ಹುಡುಗರು, 1024 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳ ಪೈಕಿ ಮೊರಾರ್ಜಿ ದೇಸಾಯಿ ಶಾಲೆ, ರಾಣಿ ಚೆನ್ಮಮ್ಮ ಶಾಲೆ, ಖಾಸಗಿ ಶಾಲೆಗಳಲ್ಲಿ ಪಟ್ಟಣದ ಆರಾಧನಾ ಶಾಲೆ, ಅರುಣೋದಯ ಶಾಲೆ, ವಿವೇಕಾನಂದ ಶಾಲೆ ಹಾಗೂ ಲಕ್ಷ್ಮೀಸಾಗರದ ಬಸವೇಶ್ವರ ಪ್ರೌಢಶಾಲೆ, ಹಿರೇಕಾನವಂಗಲದ ರುದ್ರೇಶ್ವರ ಪ್ರೌಢಶಾಲೆ ಬುಕ್ಕಾಂಬುದಿ ಉಜ್ಜಯನಿ ಸಿದ್ದಲಿಂಗೇಶ್ವರ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಕುಂಟಿಮಮಡು ಮತ್ತು ಸೊಕ್ಕೆ ಶಾಲೆಗಳು ಶೇ.98 ರಷ್ಟು ಫಲಿತಾಂಶ ಪಡೆದಿದೆ ಎಂದ ಅವರು ತಿಳಿಸಿದ್ದಾರೆ. ಕಳೆದ ಸಾಲಿಗಿಂತ ಈ ಬಾರಿ ತಾಲೂಕಿನಲ್ಲಿ 5.7 ರಷ್ಟು ಫಲಿತಾಂಶದಲ್ಲಿ ಸುಧಾರಣೆ ಕಂಡುಬಂದಿದೆ ಎಂದವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

