ಯುವತಿಯ ಅಪಹರಣ- ದೂರು
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಯುವತಿಯನ್ನು ಸ್ಥಳೀಯ ವಿವಾಹಿತ ವ್ಯಕ್ತಿ ಅಪಹರಿಸಿದ್ದಾರೆ ಎಂದು ಯುವತಿಯ ತಂದೆ ಶುಕ್ರವಾರ ಕಡಬ ಪೊಲೀಸರಿಗೆ ದೂರು ನೀಡಿದ ಘಟನೆ ವರದಿಯಾಗಿದೆ. ಬಂಟ್ರ ಗ್ರಾಮದ ಪಟ್ಟೆ ಮನೆ ನಿವಾಸಿ ಶೇಖ್ ಕರೀಂ ಎಂಬವರ ಪುತ್ರಿ ರುಬೀನಾ (19) ಎಂಬಾಕೆಯನ್ನು ಸ್ಥಳೀಯ ಮುಂಡ್ರಾಡಿ ನಿವಾಸಿ ನಝೀರ್ ಎಂಬಾತ ಅಪಹರಿಸಿದ್ದಾನೆ ಎಂದು ಶೇಖ್ ಕರೀಂ ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಪಾದಿತ ನಝೀರ್ಗೆ ಈಗಾಗಲೇ ವಿವಾಹವಾಗಿದ್ದು, ಮಕ್ಕಳು ಇದ್ದಾರೆ ಎನ್ನಲಾಗಿದೆ.
ಅಕ್ಕನ ಮಗಳೊಂದಿಗೆ ಯುವತಿ ನಾಪತ್ತೆ
ಉಪ್ಪಿನಂಗಡಿ: ಕಡಬ ಸಮೀಪದ ಪಣೆಮಜಲು ಎಂಬಲ್ಲಿ ಯುವತಿಯೋರ್ವಳು ತನ್ನ ಅಕ್ಕನ 8 ರ ಹರೆಯದ ಮಗಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸರಿಗೆ ಶುಕ್ರವಾರ ದೂರು ನೀಡಲಾಗಿದೆ. ಕಡಬ ಪಣೆಮಜಲು ನಿವಾಸಿ ಅಂಗಾರ ಮುಗೇರ ಪುತ್ರಿ ಮೀನಾಕ್ಷಿ (21) ಹಾಗೂ ಅವರ ಅಕ್ಕನ ಮಗಳು ಪವಿತಾ (8) ಎಂಬವರು ಏ. 12 ರಿಂದ ನಾಪತ್ತೆಯಾಗಿದ್ದಾರೆಂದು ತಿಳಿಸಲಾಗಿದೆ. ದೂರಿನಲ್ಲಿ ಅಂಗಾರ ಮುಗೇರರ ಅಳಿಯ ಶೀನಪ್ಪ ಎಂಬವರ ಜೊತೆ ಮಗಳು ಪರಾರಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

