ಕೊಂದಪ್ಪಡೆ ದೇವಸ್ಥಾನದಲ್ಲಿ ಆಟಿ ವಿಶೇಷ ಪೂಜೆ
ಉಪ್ಪಿನಂಗಡಿ: ಆಟಿ ತಿಂಗಳಲ್ಲಿ ಅಮವಾಸ್ಯೆ ದಿನದಂದು ರಾಮಕುಂಜ ಗ್ರಾಮದ ಕೊಂದಪ್ಪಡೆ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಆಷಾಢ ಅಮಾವಾಸ್ಯೆಯಂದು ಸಂತಾನ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷತೆ. ಈ ವರ್ಷ ಕೂಡಾ ಸಂತಾನ ಪ್ರಾಪ್ತಿಗಾಗಿ ಹರಕೆ ಹೇಳುವವರು ಹಾಗೂ ಫಲ ಕಂಡು ಹರಕೆ ತೀರಿಸುವವರು ಅನೇಕ ಭಕ್ತಾದಿಗಳು ಆಗಮಿಸಿ ಅಂತಪದ್ಮನಾಭನ ಕೃಪೆಗೆ ಪಾತ್ರರಾದರು. ಸಂತಾನ ಪೂಜೆಗಾಗಿ ಆಗಮಿಸಿದ್ದ ದಂಪತಿ ದೇವಸ್ಥಾನದ ಎದುರಿದ ತೀರ್ಥ ಗುಂಡಿಯಲ್ಲಿ ಸ್ಥಾನ ಮಾಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಮುಖ ಟಿ. ನಾರಾಯಣ ಭಟ್ ಸೇರಿದಂತೆ ಪರ್ಲತ್ತಾಯ ಪ್ರತಿಷ್ಟಾನದ ಪ್ರಮುಖರು ಇದ್ದರು.
ಚಂದ್ರದರ್ಶನ
ಕಂಡರೆ ತಿಳಿಸಿ
ಮಂಗಳೂರು: ಆ.7ರಂದು ರಮ್ಜಾನ್-29 ಆಗಿದ್ದು, ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನ ಬಗ್ಗೆ ಮುಸ್ಲಿಂ ಬಾಂಧವರು ಚಂದ್ರದರ್ಶನ ವೀಕ್ಷಿಸಿ ಕಂಡುಬಂದರೆ ದ.ಕ.ಜಿಲ್ಲಾ ಖಾಝಿ ಅಲ್ಹಜ್ ತ್ವಾಖಾ ಅಹಮದ್ ಮುಸ್ಲಿಯಾರ್ಗೆ ತಿಳಿಸಬೇಕು. ಈದುಲ್ಫಿತರ್ ಹಬ್ಬ ಪ್ರಯುಕ್ತ ನಡೆಯುವ ಈದ್ನಮಾಝ್ ಮತ್ತು ಖುತುಬ್ ಪಾರಾಯಣ ಹಬ್ಬದ ದಿನ ಬೆಳಗ್ಗೆ 8ಕ್ಕೆ ನಗರಗದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಜಿಲ್ಲಾ ಖಾಝಿ ನೇತೃತ್ವದಲ್ಲಿ ನಡೆಯಲಿದೆ ಎಂದು ಝಈನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಈದ್ಗಾ ಮಸೀದಿ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ(9019144555) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನ ಸಭೆ
ಮುಂದೂಡಿಕೆ
ಮಂಗಳೂರು: ತುಳು ರಾಜ್ಯ ಹೋರಾಟ ಸಮಿತಿ ಸಭೆ ಆ.7ರ ಬದಲು 10ರಂದು ಮಧ್ಯಾಹ್ನ 2.30ಕ್ಕೆ ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಭೆಯಲ್ಲಿ ತುಳುನಾಡು ಟ್ರಸ್ಟ್ನ ಸೆ.7ರಂದು ಜಿಲ್ಲಾಧಿಕಾರಿ ಕಚೇರಿಗೆ ಆಯೋಜಿಸುವ ಹಕ್ಕೊತ್ತಾಯ ಮೆರವಣಿಗೆ, ಸಭೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ವಿ.ವಿ.ಯಿಂದ ಹೊಸ ಕೋರ್ಸ್ ಪ್ರಾರಂಭ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ನೂತನ ಸ್ನಾತಕೋತ್ತರ ಪದವಿ ಎಂ.ಎಸ್ಸಿ ಫುಡ್ಸೈನ್ಸ್ ಮತ್ತು ಟೆಕ್ನೋಲಜಿ ಪ್ರಾರಂಭಿಸಲು ಸಂತ ಅಲೋಶಿಯಸ್ ಕಾಲೇಜಿಗೆ ಅನುಮತಿ ನೀಡಿದೆ. ಈ ಕೋರ್ಸ್ ಪ್ರಾರಂಭಿಸಲು ಕೇಂದ್ರ ಸರ್ಕಾರ ಕಾಲೇಜಿಗೆ ರು. 75 ಲಕ್ಷ ವಿಶೇಷ ಅನುದಾನ ನೀಡಿದೆ. ಉದ್ಯೋಗಾಧಾರಿತ ಸ್ನಾತಕೋತ್ತರ ಪದವಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲಾಗಿದೆ. ಈಗಾಗಲೇ ಪ್ರವೇಶಾತಿ ಶುರುವಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ವಿವರಕ್ಕೆ 9480237695ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

