ದಕ್ಷಿಣ ಕನ್ನಡ

ಗಾಯಾಳು ತಂದೆ, ಮಗಳಿಗೆ ನೆರವು ಕೋರಿಕೆ

Published On :

ಬಂಟ್ವಾಳ:  ಇತ್ತೀಚೆಗೆ ಪೆರ್ನೆ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸಾರಿಗೆ ಸಂಸ್ಥೆ ಬಸ್ ಬಂದು ಡಿಕ್ಕಿ ಹೊಡೆದ ಘಟನೆ ಯಲ್ಲಿ ಗಾಯಗೊಂಡಿರುವ ಬಡಪಾಯಿ ತಂದೆ- ಮಗಳು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸಲಾಗದೆ ಸಂಕಷ್ಟಮಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಗಡಿಯಾರ ನಿವಾಸಿ, ಕೂಲಿ ಕಾರ್ಮಿಕ ಮುಹಮ್ಮದ್(40) ಹಾಗೂ ಪುತ್ರಿ ವಿದ್ಯಾರ್ಥಿನಿ ಆಶಿಕಾ (9) ಇದೀಗ ಸಂಕಷ್ಟದಲ್ಲಿ ಸಿಲುಕಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಂಪೂರ್ಣ ಮಾಹಿತಿ ಅಪೇಕ್ಷಿಸುವವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ಖುದ್ದಾಗಿ ನೀಡಬಹುದು ಅಥವಾ ರಝಾಕ್ (9164812841) ಅವರನ್ನು ಸಂಪರ್ಕಿಸಬಹುದು. ನೆರವಾಗ ಬಯಸುವವರು ರಝಾಕ್ ಅವರ ವಿಜಯಾ ಬ್ಯಾಂಕ್ ಉಪ್ಪಿನಂಗಡಿ ಉಳಿತಾಯ ಖಾತೆ ಸಂಖ್ಯೆ 145901011001842 (ಐಎಫ್ಸಿ ಕೋಡ್- ವಿಐಜೆಬಿ0001459)ಗೆ ಹಣ ಜಮಾ ಮಾಡಬಹುದು ಎಂದವರು ಕೋರಿಕೊಂಡಿದ್ದಾರೆ.

ತಾಳಮದ್ದಳೆ ಅರ್ಥಧಾರಿ ಮೇಲೆ ಹಲ್ಲೆ
ಮಂಗಳೂರು: ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ವೇಳೆ ಅರ್ಥಧಾರಿ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಭಾನುವಾರ ಮಧ್ಯಾಹ್ನ ತಾಳಮದ್ದಳೆಯಲ್ಲಿ ಅರ್ಥಗಾರಿಕೆ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಪ್ರೇಕ್ಷಕರ ಸಾಲಿನಲ್ಲಿದ್ದ ರವಿಕಿರಣ, ಬಿಪಿನ್, ಕೃಷ್ಣ, ಸಂದೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾಗಿ ಅಶೋಕ್ ಭಟ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.