ಬಂಟ್ವಾಳ: ಶಾಲೆಯಲ್ಲಿ 'ಆಟಿಡೊಂಜಿ ಕೂಟ'ಕ್ಕೆ ಚಾಲನೆ
ಬಂಟ್ವಾಳ: ಆಟಿ ತಿಂಗಳ ಕಟ್ಟುಕಟ್ಟಳೆಗಳನ್ನು ಅನುಸರಿಸಿಕೊಂಡಾಗ ಆರೋಗ್ಯಕ್ಕೂ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.
ತುಳುನಾಡಿನ ಆಚರಣೆಗಳ ಜೊತೆಗೆ ಪೌಷ್ಟಿಕಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಬಂಟ್ವಾಳ ತಾಲೂಕಿನ ಶಿಕ್ಷಣ ಇಲಾಖೆ ಮೊದಲ ಬಾರಿಗೆ 'ಆಟಿಡೊಂಜಿ ಕೂಟ' ಎಂಬ ವಿನೂತನ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಆಯೋಜಿಸಿದ್ದು ಸೋಮವಾರ ಕಾರ್ಯಕ್ರಮಕ್ಕೆ ಅಜ್ಜಿಬೆಟ್ಟು ಶಾಲೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಕೂಟವನ್ನು ಆಟಿ ಕಳೆಂಜನಿಗೆ ಉಡಿತುಂಬುವ ಮೂಲಕ ಅವರು ಉದ್ಘಾಟಿಸಿದರು. ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಸಂತಿ ಪೂಜಾರ್ತಿ ಅಧ್ಯಕ್ಷತೆ ವಹಿಸಿದ್ದರು.
ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಬದುಕು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ್ ಪೂಜಾರಿ, ಪುರಸಭೆ ಸದಸ್ಯ ಬಿ.ಮೋಹನ್, ಮಂಗಳೂರು ಕಾರ್ಪೋರೇಟರ್ ಅಬ್ದುಲ್ ಲತೀಫ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ, ಮುಖ್ಯೋಪಾಧ್ಯಾಯಿನಿ ಸುಧಾ ವಿ. ಕಲ್ಮನೆ, ಕುಶಲ, ಎಸ್‌ಡಿಎಂಸಿ ಸದಸ್ಯ ಕೇಶವ ದೈಪಲ, ಮದ್ವರಾಜ್ ಕಲ್ಮಾಡಿ ಇದ್ದರು.
ಉಸ್ತುವಾರಿ ಸಚಿವ ಮತ್ತು ಪುರಸಭಾ ಸದಸ್ಯ ಬಿ.ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಗೀತಾ ಸ್ವಾಗತಿಸಿದರು. ನವೀನ್ ವಂದಿಸಿದರು. ಶಿವಪ್ರಸಾದ್ ನಿರೂಪಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಅಜ್ಜಿಬೆಟ್ಟು ಸರ್ಕಾರಿ ಪ್ರೌಢಶಾಲೆ, ಬಿ.ಮೂಡ ಸರ್ಕಾರಿ ಹಿ.ಪ್ರಾ. ಶಾಲೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಗ್ರಹಾರ್ ಚರ್ಚ್ ಅನುದಾನಿತ ಶಾಲೆ: ಇಲ್ಲಿನ ಅಗ್ರಹಾರ್ ಚರ್ಚ್‌ನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಚರ್ಚ್‌ನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಮಾತನಾಡಿ, ಶಾಲೆಗಳಲಿ ಆಟಿ ಆಚರಣೆ ಪರಿಕಲ್ಪನೆ ಉತ್ತಮವಾದುದು. ಆ ಮೂಲಕ ಪಾರಂಪರಿಕ ಆಹಾರ ಪದ್ಧತಿಗಳ ಅರಿವು ವಿದ್ಯಾರ್ಥಿಗಳಲ್ಲಿ ಮೂಡಲು ಸಾಧ್ಯ ಎಂದರು.
ಜಾನಪದ ವಿದ್ವಾಂಸ ಕೊರಗಪ್ಪ ಸಿಂಗಾರಕೋಡಿ ಹಾಗೂ ಜೆಸಿಐ ಬಂಟ್ವಾಳದ ಅಧ್ಯಕ್ಷ ಸಂದೀಪ್ ಸಾಲ್ಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆಟಿಯ ಸಂಪ್ರದಾಯ ಹಾಗೂ ಆಧುನಿಕ ಆಹಾರ ಪದ್ಧತಿ ಹಾಗೂ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಸ್ಥಳೀಯ ಮಹಿಳೆ ರಾಮಕ್ಕು ಪಾಡ್ದನ ಹಾಡಿದರು. ಶಾಲೆ ಮಕ್ಕಳು ಆಟಿ ಕಳೆಂಜ, ಸಸ್ಯ ನೃತ್ಯ ಪ್ರದರ್ಶಿಸಿದರು. ಶಾಲಾಭಿವೃದ್ಧಿಸಮಿತಿ ಅಧ್ಯಕ್ಷ ಚಂದ್ರಹಾಸ ನೇರಂಬೋಳು, ಹೋಲಿ ಕ್ಷೇವಿಯರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭ.ಕ್ಷೆವೆರಿನ್ ವೇದಿಕೆಯಲ್ಲಿದ್ದರು. ಶಾಲೆಯ ಶಿಕ್ಷಕಿ ಎಲಿಜಾಬೆತ್ ಸಿಕ್ವೇರಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಆಡ್ರ್ವಿನ್ ಡಿಸೋಜಾ ಪ್ರಸ್ತಾವಿಸಿದರು, ಯೋಗಿಶ್ ವಂದಿಸಿದರು. ಶಶ್ವಿತಾ ನಿರೂಪಿಸಿದರು. ಬಳಿಕ ಸಾಂಪ್ರದಾಯಿಕ ಅಡುಗೆಯ ವೀಕ್ಷಣೆ ಹಾಗೂ ಸೇವನೆ ನಡೆಯಿತು. ಸೊಪ್ಪು, ತರಕಾರಿಗಳು ಹಾಗೂ ತುಳುನಾಡಿನ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

