ಗೋರಖ್ಸಿಂಗ್ ವರದಿ ಜಾರಿಗೆ ಅಡಕೆ ಬೆಳೆಗಾರರ ಆಗ್ರಹ
ಮಂಗಳೂರು: ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಅಧ್ಯಯನ ನಡೆಸಿದ ಗೋರಖ್ಸಿಂಗ್ ವರದಿಯ ಎಲ್ಲ 13 ಅಂಶಗಳನ್ನೂ ಕೇಂದ್ರ ಸರ್ಕಾರ ಜಾರಿಗೊಳಿಸಬೇಕು. ಕೊಳೆರೋಗ ಮತ್ತು ಹಳದಿ ರೋಗದಿಂದ ಬಸವಳಿದ ಅಡಕೆ ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ವಿಶೇಷ ಪರಿಹಾರ ಪ್ಯಾಕೇಜ್ ಪ್ರಕಟಿಸಬೇಕು. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಒತ್ತುವರಿಯಾಗಿರುವ ಜಮೀನನ್ನು ರೈತರಿಗೆ ನೀಡಬೇಕೆಂದು ಮಂಗಳೂರಿನಲ್ಲಿ ಬುಧವಾರ ನಡೆದ ಅಡಕೆ ಮತ್ತು ತೆಂಗು ಬೆಳೆಯುವ ಕರ್ನಾಟಕ ಮತ್ತು ಕೇರಳ ಜಿಲ್ಲೆಗಳ ಸಂಘಟನೆಗಳ ಮುಖಂಡರ ಸಮಾಲೋಚನಾ ಸಭೆ ಆಗ್ರಹಿಸಿದೆ. ರೈತ ಸಂಘ ಜಿಲ್ಲಾಧ್ಯಕ್ಷ ರೋಹಿತಾಕ್ಷ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಗೋರಖ್ಸಿಂಗ್ ವರದಿಯಲ್ಲಿ ಕೇವಲ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಕೆ ಹಳದಿರೋಗವನ್ನು ಸೇರಿಸಲಾಗಿದೆ. ಆದರೆ ದ.ಕ., ಉಡುಪಿ ಹಾಗೂ ಭಾಗಶಃ ಕೊಡಗು ಜಿಲ್ಲೆಯಲ್ಲಿಯೂ ರೋಗ ಕಂಡುಬಂದರೂ ಸರ್ವೆಯಲ್ಲಿ ಸೇರಿಸಿಲ್ಲ. ಅಲ್ಲದೆ ಗೋರಖ್ಸಿಂಗ್ ವರದಿಯಲ್ಲಿ ಬೆಳೆಗಾರರ ಸಾಲ ಮನ್ನಾ ಸೇರಿದಂತೆ 13 ಅಂಶಗಳನ್ನು ಪ್ರಸ್ತಾಪಿಸಿದ್ದು, ಇವೆಲ್ಲವನ್ನೂ ಸರ್ಕಾರ ಜಾರಿಗೆ ತರಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕೇರಳ ಮಾದರಿ ವಿಮೆ ಬರಲಿ: ಅಡಕೆ ತೋಟಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಕೊಳೆರೋಗ ತಗಲಿದ್ದು, ಶೇ.50-60 ಫಸಲು ನಷ್ಟವಾಗಿದೆ. ಕೇರಳದಲ್ಲಿ ಇದಕ್ಕೆ ರೈತ 1,200 ವಿಮಾ ಮೊತ್ತ ಪಾವತಿಸಿದರೆ, ಗರಿಷ್ಠ 18 ಸಾವಿರದವರೆಗೆ ಪರಿಹಾರ ಪಡೆಯಬಹುದು. ಆದರೆ ಕರ್ನಾಟಕದಲ್ಲಿ ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತನಿಗೆ ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರಗಳು ರೈತರಲ್ಲಿ ನಂಬಿಕೆ ಮೂಡಿಸಿ ಬಳಿಕ ವಂಚಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

