ಸುದ್ದಿ ಸಂಕ್ಷೇಪ
ಇನ್ಫೋಸಿಸ್‌ಗೆ ಪರಿಸರಸ್ನೇಹಿ ನಿರ್ಮಾಣ ಪ್ರಶಸ್ತಿ
ಮಂಗಳೂರು: ಇಂಡಿಯನ್ ಗ್ರೀನ್ ಬಿಲ್ಡಿಂಗ್ ಸಮಿತಿ ವತಿಯಿಂದ ಇನ್ಫೋಸಿಸ್‌ನ ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ ಬ್ಲಾಕ್(ಎಸ್‌ಡಿಬಿ) 3 ಹಾಗೂ ಮೈಸೂರು ಎಸ್‌ಡಿಬಿ 6 ಕಟ್ಟಡಗಳಿಗೆ 'ಪರಿಸರ ಸ್ನೇಹಿ ನಿರ್ಮಾಣ' ಪ್ರಶಸ್ತಿ ಲಭಿಸಿದೆ. ಉಭಯ ನಗರದಲ್ಲಿನ ವಿಶೇಷ ವಿತ್ತ ವಲಯದಲ್ಲಿ ನಿರ್ಮಿಸಲಾಗಿರುವ ಇನ್ಫೋಸಿಸ್ ಸಂಸ್ಥೆಯ ಕಟ್ಟಡಗಳು ಈ ಪ್ರಶಸ್ತಿ ಪಡೆದಿದೆ. ವಿಶ್ವದ ಅತ್ಯುತ್ತಮ ಪರಿಸರ ಸ್ನೇಹಿ ಕಟ್ಟಡಗಳಿಗೆ ಈ ರೇಟಿಂಗ್ ನೀಡಲಾಗುತ್ತದೆ. ಸಂಸ್ಥೆಯು ನಿರ್ಮಾಣ ಮಾಡಿರುವ ಈ ಕಟ್ಟಡಗಳಲ್ಲಿ ನೀರಿನ ಸದ್ಬಳಕೆ, ಸಂಗ್ರಹಣೆ, ವಿದ್ಯುತ್ ಶಕ್ತಿ, ವಾತಾವರಣ, ಸಾಮಾಗ್ರಿಗಳು ಹಾಗೂಸಂಪನ್ಮೂಲಗಳು ಸೇರಿದಂತೆ ಉತ್ತಮ ಆಂತರಿಕ ವಾತಾವರಣ, ದಕ್ಷ ಗುಣಮಟ್ಟದ ಆಧಾರದ ಮೇರೆಗೆ ಪ್ರಶಸ್ತಿ ಅರ್ಹತೆ ಪಡೆದುಕೊಂಡಿದೆ.
ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆ ಸಾವು
ಕಾರ್ಕಳ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಕೆದಿಂಜೆ ಗ್ರಾಮದ ಪೊಸಾವೋ ಎಂಬಲ್ಲಿ ಶನಿವಾರ ನಡೆದಿದೆ. ಮೃತರು ಬೆನಡಿಕ್ಟ್ ಅಗೇರಾ (45). ಅವರು ಮನೆ ಎದುರಿನ ಆವರಣವಿಲ್ಲದ ಬಾವಿಗೆ ನೀರು ತರಲೆಂದು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ಸೋನಿ ಬಿಂದಿಯಾ ಅಗೇರಾ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

