ಸುದ್ದಿ ಸಂಕ್ಷೇಪ
30ರಂದು ಏಷ್ಯನ್ ಸರ್ಜನ್ ಸಮ್ಮೇಳನ
ಮಂಗಳೂರು: ಬಾಯಿ ಮತ್ತು ದವಡೆ, ಮುಖ ಸರ್ಜನ್ರ ಏಷ್ಯಾದ ಎಸೋಸಿಯೇಶನ್ ಮತ್ತು ಭಾರತೀಯ ಎಸೋಸಿಯೇಶನ್(ಎಒಎಂಎಸ್ಐ) ಆಶ್ರಯದಲ್ಲಿ ಮಂಗಳೂರಿನ ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಆಡಿಟೋರಿಯಂನಲ್ಲಿ ಆ.29ರಿಂದ 31ರ ವರೆಗೆ ನಡೆಯಲಿದೆ. ಎಒಎಂಎಸ್ಐ ಗೌರವ ಕಾರ್ಯದರ್ಶಿ ಡಾ.ಮಂಜುನಾಥ ರೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. 30ರಂದು ಬೆಳಗ್ಗೆ 11ಕ್ಕೆ ಕ್ಷೇಮದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಎನ್. ವಿ. ಹೆಗ್ಡೆ ಮತ್ತು ಉಪಕುಲಪತಿ ಪ್ರೊ. ಡಾ. ರಮಾನಂದ ಶೆಟ್ಟಿ ಅತಿಥಿಯಾಗಿ ಭಾಗವಹಿಸುವರು. ಎಒಎಂಎಸ್ಐ ಅಧ್ಯಕ್ಷ ಪ್ರೊ.ಡಾ.ನೀಲಂ ಅಂದ್ರಾದೆ ಅಧ್ಯಕ್ಷತೆ ವಹಿಸುವರು ಎಂದರು.
ಸಮಾವೇಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಯಿ, ದವಡೆ, ಮುಖ ಸರ್ಜನ್ಗಳು ಪಾಲ್ಗೊಂಡು ವಿಚಾರ ಮಂಡಿಸುವರು. ಸರ್ಜರಿಯಲ್ಲಿ ತಮ್ಮ ಆವಿಷ್ಕರ ಕುರಿತು ಮಾತನಾಡುವರು. ಸುಮಾರು ಒಂದು ಸಾವಿರ ಮಂದಿ ಸರ್ಜನ್ಗಳು, 700 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳು ಆಗಮಿಸಲಿದ್ದು, ಉಪನ್ಯಾಸ, ಕ್ವಿಜ್, ಚರ್ಚೆ ಏರ್ಪಡಿಸಲಾಗಿದೆ ಎಂದರು.
ಎಸ್ಸಿಡಿಸಿಸಿಯಿಂದ ಇತರೆ ಬ್ಯಾಂಕ್ ಹಣ ಸ್ವೀಕೃತಿ, ವರ್ಗಾವಣೆ
ಮಂಗಳೂರು: ವಾಣಿಜ್ಯ ಬ್ಯಾಂಕ್ಗಳಿಗೆ ಪೈಪೋಟಿಯಾಗಿ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗೆ ಇನ್ವರ್ಡ್ ಆರ್ಟಿಜಿಎಸ್ ಸೌಲಭ್ಯವನ್ನು ನೀಡಲು ಮುಂದಾಗಿದೆ.
ಗ್ರಾಹಕರ ಖಾತೆಗಳಿಗೆ ದೇಶದ ಯಾವುದೇ ಬ್ಯಾಂಕಿನ ಖಾತೆಗಳಿಂದ ಹಣ ಸ್ವೀಕೃತಿ(ಇನ್ವರ್ಡ್ ಆರ್ಟಿಜಿಎಸ್) ಮತ್ತು ಹಣ ವರ್ಗಾವಣೆ(ಔಟ್ವರ್ಡ್ ಆರ್ಟಿಜಿಎಸ್)ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ. ಈ ಸೌಲಭ್ಯಕ್ಕೆ ಆರ್ಬಿಐನಿಂದ ಐಎಫ್ಎಸ್ಸಿ ಕೋಡ್ (ಐಇಓಔ078ಖಈಉಈ)ನ್ನು ಬ್ಯಾಂಕ್ ಪಡೆದುಕೊಂಡಿದೆ. ಈಗಾಗಲೇ ಕೋರ್ ಬ್ಯಾಂಕಿಂಗ್ ಸೇವೆ ಜತೆಗೆ ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

