ಅಡಕೆಯಲ್ಲಿ ಕ್ಯಾನ್ಸರ್ಕಾರಕ ಗುಣಗಳಿಲ್ಲ: ಡಾ. ಹೆಗ್ಗಡೆ
ಬೆಳ್ತಂಗಡಿ: ಅಡಕೆಯಲ್ಲಿ ಕ್ಯಾನ್ಸರ್ಕಾರಕ ಗುಣಗಳಿಲ್ಲ. ಬದಲಾಗಿ ಔಷಧದ ಗುಣಗಳಿವೆ ಎಂಬುದನ್ನು ಸಂಶೋಧನೆಗೊಳಪಡಿಸಲು ಕ್ಯಾಂಪ್ಕೋ ಪ್ರೇರಿತ ಅಡಕೆ ಸಂಶೋಧನಾ ಮತ್ತು ಅಭಿವೃದ್ಧಿ (ಎಆರ್ಡಿಎಫ್) ಕೇಂದ್ರ ಸಿದ್ಧವಿದೆ ಎಂದು ಸಂಶೋಧನಾ ಕೇಂದ್ರದ ಅಧ್ಯಕ್ಷ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಭಾನುವಾರ ಮಡಂತ್ಯಾರಿನಲ್ಲಿ ನಡೆದ ಕೃಷಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಡಕೆಗೆ ಬೆಲೆ ಕಡಿಮೆ ಇದ್ದಾಗ ಹುಟ್ಟಿಕೊಂಡ ಸಂಶೋಧನಾ ಕೇಂದ್ರದಲ್ಲಿ ಮಾಡಿದ ಪರಿಶೋಧನೆಯ ಫಲವಾಗಿ ಅಡಕೆಯಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದು ಪತ್ತೆಯಾಗಿದೆ. ಕ್ಯಾನ್ಸರ್ಗೆ ಅಡಕೆ ಕಾರಣವಲ್ಲ. ಗುಟ್ಕಾದಲ್ಲಿರುವ ರಾಸಾಯನಿಕ ಅಂಶವೇ ಕಾರಣ. ಆದರೆ, ಇದೀಗ ಅಡಕೆ ನಿಷೇಧದ ಬಗ್ಗೆ ಮಾತುಗಳು ಬಂದಿವೆ. ಹೀಗಾಗಿ ಸಂಶೋಧನಾ ಕೇಂದ್ರ, ಉಡುಪಿಯ ಆಯುರ್ವೇದ ಕಾಲೇಜಿನ ಜೊತೆಗೆ ಮತ್ತೊಮ್ಮೆ ಅದಕ್ಕೆ ಸರಿಯಾದ ಮೂಲ ಸಂಶೋಧನೆ ಮಾಡಲು ಸಿದ್ಧರಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

