ದಕ್ಷಿಣ ಕನ್ನಡ

ಉಮರ್ ಅಬ್ದುಲ್ಲಾ ಹೇಳಿಕೆ ದುರದೃಷ್ಟಕರ: ರಾಜೇಶ್

Published On :

ಕಾರ್ಕಳ: ಸಂಸತ್ ದಾಳಿಯ ರೂವಾರಿ ದಾಳಿಯ ರೂವಾರಿ ಭಯೋತ್ಪಾದಕ, ದೇಶದ್ರೋಹಿ ಅಫ್ಜಲ್‌ನನ್ನು ಗಲ್ಲಿಗೇರಿಸಿದದ ಕುರಿತು ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿಕೆ ದುರದೃಷ್ಟಕರ, ದೇಶದ್ರೋಹಿ ಹೇಳಿಕೆ ಎಂದು ದೇಶವಿರೋಧಿ ಹೇಳಿಕೆ ಎಂದು ನ್ಯೂ ಸ್ಟಾರ್ ಗೇಮ್ಸ್ ಕ್ಲಬ್ ಗೌರವಾಧ್ಯಕ್ಷ ಬಿ.ರಾಜೇಶ್ ಶೆಣೈ ಅಭಿಪ್ರಾಯಪಟ್ಟಿದ್ದಾರೆ. ನ್ಯೂ ಸ್ಟಾರ್ ಗೇಮ್ಸ್ ಕ್ಲಬ್ ಗಾಂಧಿ ಮೈದಾನ ವತಿಯಿಂದ ನಡೆದ 'ದೇಶ ಮತ್ತು ಪ್ರಜೆ' ಕುರಿತು ಅವರು ಮಾತನಾಡಿದರು. ದೇಶದ್ರೋಹಿ ಅಫ್ಜಲ್‌ನನ್ನು ಗಲ್ಲಿಗೇರಿಸಿದ್ದರಿಂದ ಕಾಶ್ಮೀರಿ ಜನರಲ್ಲಿ ಪ್ರತ್ಯೇಕ ಭಾವ ಉಂಟಾಗುವುದಾದರೆ, ಇಂತಹ ಪ್ರತ್ಯೇಕ ಭಾವ ಅನುಭವಿಸುವವರು ಈ ದೇಶದಲ್ಲಿ ಇರುವುದಕ್ಕಿಂತ ಅವರೆಲ್ಲರನ್ನು ಈ ದೇಶದಿಂದ ಹೊರದಬ್ಬುವುದೇ ಸೂಕ್ತವಲ್ಲವೇ ಎಂದು ಪ್ರಶ್ನಿಸಿದರು. ನ್ಯೂ ಸ್ಟಾರ್ ಗೇಮ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಹರೀಶ್, ನಾಗೇಶ್, ಪ್ರವೀಣ್, ರೋಹಿತ್ ಇದ್ದರು.
ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಆಯ್ಕೆ
ಉಡುಪಿ: ಕೋಲ್ಕತ್ತಾ ಹೌರಾದ ಸೊಸೈಟಿ ಆಫ್ ಫೊಟೋಗ್ರಾಫರ್ಸ್ ಆಯೋಜಿಸಿದ್ದ 45ನೇ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರು ತೆಗೆದ ಕರಾವಳಿ ಕಂಬಳ ಚಿತ್ರವು ಆಯ್ಕೆಯಾಗಿದೆ. ಆಸ್ಟ್ರೋಮೋಹನ್ ಅವರು ಇದುವರೆಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ 21 ರಾಷ್ಟ್ರೀಯ ಪ್ರಶಸ್ತಿಗಳನ್ನುಗಳಿಸಿದ್ದಾರೆ.
17ರಂದು ಮಾಹಿತಿ ಶಿಬಿರ
ಉಡುಪಿ: ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಕೆಲಸ ಮಾಡುತ್ತಿರುವ ಇಲ್ಲಿನ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಉಡುಪಿ ನಗರಸಭಾ ಕಚೇರಿ ಪಕ್ಕದ ಟಿ.ಎ.ಪೈ ಹಿಂದಿ ಭವನದಲ್ಲಿ ಫೆ.17ರಂದು ಬೆಳಗ್ಗೆ 9.30ಕ್ಕೆ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ವಿಶೇಷ ಮಾಹಿತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಆಸಕ್ತರು ಭಾಗವಹಿಸಬಹುದು ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.