ದಕ್ಷಿಣ ಕನ್ನಡ

ಸಲಿಂಗ ಕಾಮ ಹಿನ್ನೆಲೆ; ಕಾರ್ಮಿಕನ ಕೊಲೆ

Published On :

ಮಂಗಳೂರು: ಬಜ್ಪೆ ಪೆಟ್ರೋಲ್‌ಬಂಕ್ ಬಳಿಯ ಕಿನ್ನಿಪದವು ಎಂಬಲ್ಲಿ ಸಲಿಂಗಕಾಮ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಮಾಡಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
 ಕೊಲೆಯಾದ ವ್ಯಕ್ತಿ ಕುಳಾಯಿ ಗೋಕುಲನಗರ ನಿವಾಸಿ, ಕೂಲಿ ಕಾರ್ಮಿಕ ಯಶವಂತ(34). ಈತ ಬುಧವಾರ ರಾತ್ರಿ ಕೊಲೆಯಾಗಿದ್ದು, ಗುರುವಾರ ಸಂಜೆ ವೇಳೆಗೆ ಮೃತದೇಹ ಕಿನ್ನಿಪದವಿನ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ದೊರೆತಿದೆ. ಘಟನೆಗೆ ಸಂಬಂಧಿಸಿ ಕಿನ್ನಿಪದವು ನಿವಾಸಿ ದತ್ತ(21)ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಯಶವಂತನಿಗಿದ್ದ ಸಲಿಂಗ ಕಾಮದ ಚಟವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಇವರು ಯಾವಾಗಲೂ ಜತೆಯಾಗಿಯೇ ಓಡಾಡುತ್ತಿದ್ದರು. ಪ್ರಕರಣದ ಹಿಂದಿನ ದಿನ ಕಿನ್ನಿಪದವಿನ ಮಾಂಕಾಳಿ ದೇವಸ್ಥಾನದಲ್ಲಿ ನೇಮ ನಡೆಯುತ್ತಿತ್ತು. ಈ ಸಂದರ್ಭ ಯಶವಂತ ಮತ್ತು ದತ್ತ ಅದರಲ್ಲಿ ಭಾಗವಹಿಸಿದ್ದರು. ಆದರೆ ಯಶವಂತನ ಮೃತದೇಹ ಪತ್ತೆಯಾದ ಬಳಿಕ ಅನುಮಾನದ ಮೇರೆಗೆ ದತ್ತನನ್ನು ಬಂಧಿಸಿದಾಗ ಆತ ಕೊಲೆ ನಡೆಸಿರುವುದನ್ನು ಹೇಳಿದ್ದ.
ಯಾಕಾಗಿ ಕೊಲೆ?: ಯಶವಂತ್‌ಗೆ ಸಲಿಂಗ ಕಾಮದ ಚಟವಿದ್ದ ಬಗ್ಗೆ ದತ್ತ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ. ಇದಕ್ಕಾಗಿ ದತ್ತನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರೂ ಜತೆಯಾಗಿಯೇ ಇರುತ್ತಿದ್ದರು. ಯಾವುದೊ ಘಟನೆ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡಿರಬಹುದು ಎಂದು ಹೇಳಲಾಗಿದೆ. ಯಶವಂತನಗಿಂತ ಚಿಕ್ಕವನಾದ ದತ್ತ, ಯಶವಂತನ ಚಟದಿಂದ ಬೇಸತ್ತು ಮಾರಕಾಯುಧದಿಂದ ಕಡಿದು ಕೊಲೆ ಮಾಡಿರಬೇಕು ಎಂದು ಹೇಳಲಾಗಿದೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.