ದಕ್ಷಿಣ ಕನ್ನಡ

ಇಂದಿನಿಂದ ಡೆಂಜೋಳಿ ದೇವಳ ಬ್ರಹ್ಮಕಲಶ, ಜಾತ್ರೆ

Published On :

ಬೆಳ್ತಂಗಡಿ: ಜ.23 ರಿಂದ 29 ರವರೆಗೆ  ಬೆಳ್ತಂಗಡಿ ಡೆಂಜೋಳಿ ಶ್ರೀ ಸದಾಶಿವ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮತ್ತು ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.
ಗರ್ಡಾಡಿ ಗ್ರಾಮದಲ್ಲಿ ಹರಿಯುವ ಫಲ್ಗುಣಿ ನದಿ ತೀರದಲ್ಲಿ ತಟದಲ್ಲಿರುವ ಡೆಂಜೋಳಿ ಶ್ರೀ ಸದಾಶಿವ ದೇವರ ಸಾನಿಧ್ಯವಿದೆ. 600 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ 1983ರ ಮೊದಲು ದಟ್ಟ ಕಾನನದೊಳಗಿತ್ತು. ಆಗಿನ ಆಡಳಿತದಾರರಾಗಿದ್ದ ದಿ. ರಾಮಕೃಷ್ಣ ಮಂಜಿತ್ತಾಯ ದೇವಳದ ನವೀಕರಣದ ಸಂಕಲ್ಪ ತೊಟ್ಟು ಕಾರ್ಯನಿರತರಾದ ಪರಿಣಾಮ 1988ರಲ್ಲಿ ದೇವಾಲಯ ನವೀಕರಣಗೊಂಡಿತು. ಅಂದು ಹಣಬಲವಿಲ್ಲದೆ ಕೇವಲ ಜನಬಲದಿಂದ 108 ದಿನಗಳಲ್ಲಿ ನಿರ್ಮಾಣಗೊಂಡ ಈ ಕ್ಷೇತ್ರವನ್ನು ನೋಡಿ ಡಾ. ಹೆಗ್ಗಡೆಯವರು ಆಶ್ಚರ್ಯಪಟ್ಟು ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕಾದರೆ ಹೇಗೆ ಮಾಡಬೇಕೆಂದು ಡೆಂಜೋಳಿ ದೇಗುಲವನ್ನು ನೋಡಿ ತಿಳಿಯಿರಿ ಎಂದು ಬೇರೆ ದೇವಸ್ಥಾನದವರನ್ನು ಡೆಂಜೋಳಿಗೆ ಕಳುಹಿಸಿದ ಉದಾಹರಣೆಗಳಿವೆ.
ಊರವರ ಸಹಕಾರ ಪಡೆದು ಮುಂಭಾಗದ ಗೋಪುರವನ್ನು ನಿರ್ಮಿಸಿ ಧರ್ಮದೈವಗಳನ್ನು ಪ್ರತಿಷ್ಠಾಪಿಸಿ, ದ್ವಾದಶ ಸಂವತ್ಸರಗಳ ಬಳಿಕ ಮತ್ತೆ 2001ರಲ್ಲಿ ಬ್ರಹ್ಮಕಲಶಾದಿಗಳನ್ನು ನಡೆಸಿ, ಧ್ವಜಾರೋಹಣಗೊಂಡು 5 ದಿನಗಳ ವಾರ್ಷಿಕ ಜಾತ್ರೋತ್ಸವವನ್ನು ಉತ್ಸವ ಸಮಿತಿ ಮೂಲಕ ಪ್ರಾರಂಭಿಸಲಾಯಿತು. ನಂತರದ ದಿನಗಳಲ್ಲಿ ರಜತ ಪುಷ್ಪಕನ್ನಡಿ, ಶಿಲಾಶಾಸನ, ಸುತ್ತುಪೌಳಿ, ಧ್ವಜಸ್ತಂಭ, ಮಹಾದ್ವಾರಗಳನ್ನು ನಿರ್ಮಿಸಿ ದೇವರಿಗೆ ಸಮರ್ಪಿಸಿದ್ದಾರೆ. ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಎಚ್. ಬಿರ್ಮಣ್ಣ ಶೆಟ್ಟಿ ಹಂಕರಜಾಲು, ಅಧ್ಯಕ್ಷ ವಕೀಲ ಹರೀಶ್ ಪೂಂಜ, ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ, ವಿಶ್ವನಾಥ ಹೊಳ್ಳ, ಉತ್ಸವ ಸಮಿತಿ ಅಧ್ಯಕ್ಷ ಜಿ. ಜಯರಾಮ ಗೌಡ, ಭಜನಾ ಮಂಡಳಿ ಅಧ್ಯಕ್ಷ ಎಚ್. ಶ್ರೀನಿವಾಸ ಶೆಟ್ಟಿ ಹಂಕರಜಾಲು  ಉತ್ಸವದ ಯಶಸ್ಸಿಗೆ ದುಡಿಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.