ಕಾರಂತರ ಕಾದಂಬರಿಗಳ ತೈಲವರ್ಣ ಚಿತ್ರ ನಿರ್ಮಾಣ ಸಮಾರೋಪ
ಪುತ್ತೂರು: ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಕಾರಂತರ ಕಾದಂಬರಿಗಳ ತೈಲ ವರ್ಣಚಿತ್ರ ನಿರ್ಮಾಣ ಶಿಬಿರ ಮಂಗಳವಾರ ಸಮಾರೋಪಗೊಂಡಿತು.
ಬಾಲವನ ಸಮಿತಿ ವತಿಯಿಂದ ಕಾರಂತರ ಆಯ್ದ 15 ಕಾದಂಬರಿಗಳ ಕುರಿತು ಪ್ರಸಿದ್ಧ ಸಾಹಿತಿಗಳು ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಚರ್ಚೆ ನಡೆಸಿ ಕಾದಂಬರಿಯಲ್ಲಿನ ಆಶಯಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜ.25ರಿಂದ 29ರತನಕ ತೈಲವರ್ಣ ಕಲಾಕೃತಿಗಳ ರಚನಾ ಶಿಬಿರ ನಡೆಯಿತು.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಎಂ.ಬಿ. ಪಾಟೀಲ್, ವಿ.ಜೆ. ಅಂದಾನಿ, ಚಂದ್ರನಾಥ ಆಚಾರ್ಯ, ಪ.ಸ. ಕುಮಾರ್. ಎಂ.ಎಸ್. ಮೂರ್ತಿ, ರೇಖಾ ರಾಣಿ, ಸುದೇಶ್ ಮಹಾನ, ಸುರೇಶ್ಚಂದ್ರ ದತ್ತ, ಕೆ.ಕೆ. ಮಕಾಳಿ, ಬಾಬುರಾವ್ ನಾಡೊಣಿ, ರೇಣುಕಾ ಮಾರ್ಕಂಡೆ, ಮೋಹನ್ ಸೋನ ಮತ್ತು ರಮೇಶ್ ರಾವ್ ಅವರು ಕಾರಂತರ ಕಾದಂಬರಿಗಳಿಗೆ ಚಿತ್ರ ರೂಪ ನೀಡಿ ಪೂರ್ಣಗೊಳಿಸಿದರು. ಸಾಹಿತಿಗಳಾದ ಲಕ್ಷ್ಮೀಶ ತೋಳ್ಪಾಡಿ, ಪುರಂದರ ಭಟ್, ಸುಬ್ರಾಯ ಚೊಕ್ಕಾಡಿ, ತಾಳ್ತಜೆ ವಸಂತ ಕುಮಾರ್, ವರದರಾಜ ಚಂದ್ರಗಿರಿ, ಜಯಪ್ರಕಾಶ್ ಮಾವಿನಕುಳಿ, ಚಿಕ್ಕಮಗಳೂರು ಗಣೇಶ್, ನರೇಂದ್ರ ರೈ ದೇರ್ಲ, ರಾಜೇಶ್ ಬೆಜ್ಜಂಗಳ, ಜಯಪ್ರಕಾಶ್ ಶೆಟ್ಟಿ ಕುಂದಾಪುರ, ತುಕಾರಾಮ ಮೈಸೂರು, ರಮೇಶ್ಚಂದ್ರ ದತ್ತ ಬೆಂಗಳೂರು ಮತ್ತು ಡಾ. ಸುಬ್ರಹ್ಮಣ್ಯ ಭಟ್ ಅವರು ಕಲಾವಿದರೊಂದಿಗೆ ಸಂವಾದ ನಡೆಸುವುದರೊಂದಿಗೆ ಡಾ. ಕಾರಂತರ ಕಾದಂಬರಿಯ ಕಲಾಚಿತ್ರದ ಕಲ್ಪನೆಗೆ ಸಾಥ್ ನೀಡಿದ್ದರು. ಚಂದ್ರ ಸೌಗಂಧಿಕಾ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

