ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಮಂಗಳೂರು:
ವಿದ್ಯಾರ್ಥಿನಿಯೊಬ್ಬಳನ್ನು ನಂಬಿಸಿ, ಸತತ 3 ತಿಂಗಳ ಕಾಲ ಅತ್ಯಾಚಾರ ನಡೆಸಿದ ಕಂಡಕ್ಟರ್ ಕಾವೂರು ಶಾಂತಿನಗರ ನಿವಾಸಿ ಫೈಸಲ್(30)ನನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಕಾವೂರು ಜ್ಯೋತಿನಗರ ನಿವಾಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರೇಮಾ (ಹೆಸರು ಬದಲಿಸಲಾಗಿದೆ)ನಗರದಲ್ಲಿ ಶಾಲೆಗೆ ಪ್ರತಿ ದಿನ 47 ಬಿ 'ರಕ್ಷಾ' ಬಸ್ನಲ್ಲಿ ತೆರಳುತ್ತಿದ್ದಳು. ಈ ಬಸ್ ಕಂಡಕ್ಟರ್ ಫೈಸಲ್ ವಿದ್ಯಾರ್ಥಿನಿ ಜತೆ ಸಲುಗೆ ಬೆಳೆಸಿದ್ದ. ತನ್ನೊಂದಿಗೆ ಸೇರದಿದ್ದರೆ ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರ ಹಾಕುವುದಾಗಿ ಬೆದರಿಕೆ ಒಡ್ಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಏಪ್ರಿಲ್ನಲ್ಲಿ ವಿದ್ಯಾರ್ಥಿನಿ ಹೆತ್ತವರು ಸಂಬಂಧಿಕ ಅಂತ್ಯಕ್ರಿಯೆಗೆಂದು ತಮ್ಮೂರಾದ ಭದ್ರಾವತಿಗೆ ಹೋದಾಗ ವಿದ್ಯಾರ್ಥಿನಿ ಮನೆಯಲ್ಲಿಯೇ ಇದ್ದಳು. ಈ ವಿಚಾರ ತಿಳಿದ ಫೈಸಲ್ 3 ದಿನಗಳ ಕಾಲ ಮನೆಗೆ ಬಂದು ಅತ್ಯಾಚಾರ ನಡೆಸಿದ್ದಾನೆ. ಈ ಅತ್ಯಾಚಾರವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾನೆ. ಗರ್ಭಿಣಿಯಾದಾಗ ಹೆತ್ತವರು ವಿಚಾರಣೆ ನಡೆಸಿದ್ದು, ಫೈಸಲ್ ನಡೆಸಿದ ಕೃತ್ಯವನ್ನು ಹೇಳಿದ್ದಾಳೆ. ಆರೋಪಿ ಫೈಸಲ್ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರ
ಚಿಕ್ಕಮಗಳೂರು:
ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಎಲ್ಐಸಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಧನುಕುಮಾರ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆಶ್ರಯ ಬಡಾವಣೆಯಲ್ಲಿ ವಾಸವಾಗಿರುವ ಈ ಮಹಿಳೆ ಮನೆಗೆ ಮಂಗಳವಾರ ಸಂಜೆ ಧನುಕುಮಾರ್ ಎಲ್ಐಸಿ ಪಾಲಿಸಿ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಮಿಸಿದ್ದ. ಆಗ ಅಕ್ಕಪಕ್ಕದವರು ಸಹ ಅಲ್ಲಿಗೆ ಆಗಮಿಸಿದ್ದರು. ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಸಾದ ಬಳಿಕ ಧನುಕುಮಾರ್ ತಾನು ಹೋಗಿದ್ದ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಚಿಕ್ಕಮಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈನ ವಿಗ್ರಹ ಕಳವು: ಬಂಧನ
ಮಂಗಳೂರು
:  ಮೂಡುಬಿದರೆ ಸಿದ್ಧಾಂತ ದರ್ಶನ ಮಂದಿರದಿಂದ ಅಮೂಲ್ಯ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಂತೋಷ್ ದಾಸ್ನ ಪತ್ನಿ ಮತ್ತು ಮಾವನನ್ನು ಬಂಧಿಸಿದ ರಾಜ್ಯ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದು, ಜು.30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ದೀಪ್ತಿಮಯಿ ಮೊಹಾಂತಿ ಮತ್ತು ದಿಗಂಬರ ಮೊಹಾಂತಿ ಬಂಧಿತರು. ಸಂತೋಷ್ ದಾಸ್ಗೆ ಸೇರಿದ ಲಾಕರ್ನಿಂದ ವಶಪಡಿಸಿಕೊಳ್ಳಲಾದ ಚಿನ್ನದ ಗಟ್ಟಿಗಳು ಮೂಡುಬಿದರೆ ಜೈನಮಂದಿರಕ್ಕೆ ಸೇರಿದೆಯೇ ಎಂಬುದು ದೃಢಪಟ್ಟಿಲ್ಲ. ಭುವನೇಶ್ವರದ ಚಂದ್ರಶೇಖರಪುರದಲ್ಲಿನ ಮನೆಯಲ್ಲಿ ದಾಳಿ ನಡೆಸಿ ಪುಟ್ಟ ವಿಗ್ರಹ, ರತ್ನದ ಹರಳು, 2 ಲಕ್ಷ ನಗದು ಸೇರಿ 3 ಕೋಟಿಯ ವಿಗ್ರಹ,ಆಭರಣ ವಶಕ್ಕೆ ತೆಗೆದುಕೊಂ ಡಿದ್ದಾರೆ.
ಜುವೆಲ್ಲರಿಗೂ ಕನ್ನ: ದಿಗಂಬರ ಮೊಹಾಂತಿ ಭುವನೇಶ್ವರದ ನಗರಾಭಿವೃದ್ಧಿ ಇಲಾಖೆಯಲ್ಲಿ 4ನೇ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಸಂತೋಷ್ ದಾಸ್ ಭುವನೇಶ್ವದಲ್ಲಿಯೂ ಅನೇಕ ಜುವೆಲ್ಲರಿಗಳಿಗೆ ಕನ್ನ ಹಾಕಿದ್ದ, ಕಾರ್ಕಳದಲ್ಲಿಯೂ ಜುವೆಲ್ಲರಿ ಕಳವಾಗಿದ್ದು, ಗ್ಯಾಸ್ಕಟ್ಟರ್ ಬಳಸಿದ ಹಿನ್ನೆಲೆಯಲ್ಲಿ ಇದೂ ಸಂತೋಷ್ದಾಸ್ ಕೃತ್ಯ ಇರಬಹುದು ಎಂಬ ಶಂಕೆ ಬಲವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.