ದಕ್ಷಿಣ ಕನ್ನಡ

ಗಂಗೊಳ್ಳಿ: ಅಸ್ಪೃಶ್ಯತೆ ಆಚರಣೆ ವಿರುದ್ಧ ದೂರು

Published On :

ಉಡುಪಿ: ದೇಶದಾದ್ಯಂತ ಅಸ್ಪೃಶ್ಯತೆ ನಿಷೇಧ ಇದ್ದರೂ,  ಉಡುಪಿಯಲ್ಲಿ ಅಸ್ಪೃಶ್ಯತೆಯ ಅಮಾನವೀಯ ಘಟನೆ ನಡೆದಿದೆ.   ಇಲ್ಲಿನ ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ ಎಂಬವರ ಮದುವೆಯ ಸಂದರ್ಭದಲ್ಲಿ ಪುರೋಹಿತರು ಮತ್ತು ಇತರರು ಅಸ್ಪೃಶ್ಯತೆ ಆಚರಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಸಾಕಮ್ಮ ಅವರ ವಿವಾಹಕ್ಕೆ ನೆರೆಯ ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಅಣ್ಣಪ್ಪಯ್ಯ ಸಭಾ ಭವನವನ್ನು ಕಾಯ್ದಿರಿಸಲಾಗಿತ್ತು ಮತ್ತು ಸಭಾಭವನದ ಮಾಲೀಕರಿಗೆ ರು. 42,000 ಮುಂಗಡವನ್ನೂ ನೀಡಲಾಗಿತ್ತು. ಬುಧವಾರ ಬೆಳಗ್ಗೆ 11 ಗಂಟೆಗೆ ವಧೂವರರು ಸಭಾಭವನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಕೊರಗ ಜಾತಿಯ ಸಂಪ್ರದಾಯದಂತೆ ಮದುವೆಗೆ ವಾದ್ಯದ ಬದಲು ಡೋಲು, ಚಂಡೆ ಬಾರಿಸಿದರು.   ಇದನ್ನು ಗಮನಿಸಿದ ಪುರೋಹಿತರು ಮತ್ತು ಸಭಾಭವನದ ಸ್ವಚ್ಛತೆಯ ಮಹಿಳೆಯರು, 'ಇದು ಕೊರಗರ ಮದುವೆ ಈ ಮದುವೆಯ ಕಾರ್ಯ ನಾವು ಮಾಡುವುದಿಲ್ಲ ಹಾಗೂ ಅವರು ಉಂಡ ಬಾಳೆ ಎಲೆಯನ್ನು ನಾವು ತೆಗೆಯುದಿಲ್ಲ' ಎಂದು ಮದುವೆಗೆ ಬಂದ ಗಣ್ಯರ ಎದುರಿನಲ್ಲಿ ಜಾತಿ ನಿಂದನೆ ಮಾಡಿದರು. ಬಳಿಕ, ಮದುವೆ ಮಾಡಿಸದೆ ಸಭಾಭವನದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  ಈ ಬಗ್ಗೆ ಸಾಕಮ್ಮ ಸಹೋದರ ಈಶ್ವರ ಜಿ. ಎಂಬವರು ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದಸಂಸ ಖಂಡನೆ: ಘಟನೆ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸಮಿತಿಯ ಸದಸ್ಯ ಸುಂದರ ಮಾಸ್ತರ್ ಮತ್ತು ಇತರ ಪದಾಧಿಕಾರಿಗಳು, ಗಂಗೊಳ್ಳಿಯಲ್ಲಿ ಅಸ್ಪೃಸ್ಯತೆ ಆಚರಿಸಿದವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.