ದಕ್ಷಿಣ ಕನ್ನಡ

ಏ.1ರಿಂದ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ

Published On :

ಮಂಗಳೂರು: ರಾಜ್ಯಾದ್ಯಂತ ವಿವಿಧ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ತುಟ್ಟಿಭತ್ತೆ ಏರಿಕೆಯಾಗಿದ್ದು, ಏ.1 ರಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ ಸಂಬಂಧಪಟ್ಟ ಎಲ್ಲಾ ಮಾಲಕರು ತಮ್ಮ ಕಾರ್ಮಿಕರಿಗೆ ಇಲಾಖೆ ಹೊರಡಿಸಿದ ಭತ್ಯೆಯನ್ನು ನೀಡುವಂತೆ ಭಾರತೀಯ ಮಜ್ದೂರ್ ಸಂಘ ಆದೇಶಿಸಿದೆ.
ವಿಭಾಗಗಳು: ಸಿನಿಮಾ ತಯಾರಿ, ವಿತರಣೆ, ಪ್ರದರ್ಶನ ವಿಭಾಗದಲ್ಲಿ ದುಡಿಯುವ ನೌಕರರಿಗೆ ಒಂದು ದಿನದಲ್ಲಿ ರು. 26.02 ಹಾಗೂ ತಿಂಗಳಿಗೆ ರು. 676.50 ಹೆಚ್ಚಿಸಲಾಗಿದೆ.
ರೇಷ್ಮೆ, ಹಂಚು, ತಂಬಾಕು ಸಂಸ್ಕರಣೆ, ಖಂಡಸಾರಿ ಸಕ್ಕರೆ ಕಾರ್ಮಿಕರಿಗೆ ದಿನಕ್ಕೆ ರು. 23.42, ತಿಂಗಳಿಗೆ 608.85 ಹೆಚ್ಚಳ.
ಹೊಟೇಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಗೇರುಬೀಜ, ಕಾಫಿ ಕ್ಯೂರಿಂಗ್, ಕ್ಲಬ್, ಮನೆಕೆಲಸ, ಹಾಸ್ಟೆಲ್, ಐಸ್ ಫ್ಯಾಕ್ಟರಿ, ಎಲೆಕ್ಟ್ರೋನಿಕ್ಸ್, ನಗರ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಪಟ್ಟಣ, ಗ್ರಾಮ ಪಂಚಾಯ್ತಿ ನೌಕರರಿಗೆ ಹಾಗೂ ಇನ್ನಿತರ ಸಂಸ್ಥೆಯ ಕಾರ್ಮಿಕರಿಗೆ ದಿನ ಒಂದರಂತೆ 20.82, ತಿಂಗಳಿಗೆ ರು. 541.20.
ಫೌಂಡ್ರಿ, ಆಯಿಲ್ ಮಿಲ್, ಪ್ರಿಂಟಿಂಗ್ ಪ್ರೆಸ್, ವೀನಿಯರ್, ಮೀನುಗಾರಿಕೆ, ಮೀನು ಸಂಸ್ಕರಣೆ, ಕಪ್ಪೆಕಾಲು ರಫ್ತು ಕಾರ್ಮಿಕರಿಗೆ, ಅಗರಬತ್ತಿ ತಯಾರಿ, ಆಟೋಮೊಬೈಲ್ ಎಂಜಿನಿಯರಿಂಗ್‌ನವರಿಗೆ ಒಂದರಂತೆ ರು. 18.21, ತಿಂಗಳಿಗೆ ರು. 473.55.
ಮರದ ಮಿಲ್ ಕಾರ್ಪೆಂಟರಿ, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್, ಫ್ಲೈವುಡ್, ಪಬ್ಲಿಕ್ ಮೋಟರ್ ಟ್ರಾನ್ಸ್‌ಪೋರ್ಟ್, ಸೆಕ್ಯೂರಿಟಿ ಗಾರ್ಡ್, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ನೌಕರರಿಗೆ ದಿನಕ್ಕೆ ರು. 15.61 ಮತ್ತು ತಿಂಗಳಿಗೆ ರು. 405.90.
ಬೀಡಿ ಕಾರ್ಮಿಕರಿಗೆ ಒಂದು ಸಾವಿರ ಬೀಡಿಗೆ ರು. 15.61 ಹೆಚ್ಚಳವಾಗಿದ್ದು, ಸಾವಿರ ಬೀಡಿಗೆ ಒಟ್ಟು ರು. 131.81 ಸಿಗಲಿದೆ. ಬೀಡಿ ಲೇಬಲ್ ಕಾರ್ಮಿಕರಿಗೆ ರು. 1ಲಕ್ಷ ಬೀಡಿ ಲೇಬಲ್‌ಗೆ 31.81 ಏರಿಕೆಯಾಗಿದ್ದು, ಮಾಸಿಕ ವೇತನ ರು. 405.90 ಸಿಗಲಿದೆ.
ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುವ ಗುಮಾಸ್ತರಿಗೆ, ಕಂಪ್ಯೂಟರ್ ಓಪರೇಟರ್, ಡಾಟಾ ಎಂಟ್ರಿ ಒಪರೇಟಿವ್ ಟ್ಯಾಕ್ಸ್ ಕಲೆಕ್ಟರ್, ದಾರಿದೀಪ ನೌಕರರಿಗೆ ತಿಂಗಳಿಗೆ ರು. 7238.40
ಪಂಪ್ ಓಪರೇಟಿವ್, ಮ್ಯೆಕಾನಿಕ್, ಚಾಲಕರು, ಒಳಚರಂಡಿ ಪಂಪ್ ಓಪರೇಟರ್ಸ್‌ಗೆ ರು. 7004.40, ವಾಟರ್‌ಮ್ಯಾನ್ ರು. 6,770.40 ಹಾಗೂ ಇತರ ಕುಶಲ ಕಾರ್ಮಿಕರಿಗೆ ಮಾಸಿಕ ವೇತನ ರು. 6401.40 ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಕಾರ್ಮಿಕರ ಭಾರತೀಯ ಮಜ್ದೂರ್ ಸಂಘ 0824-2425169 ಸಂಪರ್ಕಿಸಬಹುದು ಎಂದು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಕೆ. ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.