ದಕ್ಷಿಣ ಕನ್ನಡ

ಬಂಟ್ವಾಳ ಶಾಸಕರಿಂದ ಕೀಳು ರಾಜಕೀಯ: ಕೊಟ್ಟಾರಿ ಆರೋಪ

Published On :

ಬಂಟ್ವಾಳ: ಶಾಸಕ ಬಿ.ರಮಾನಾಥ ರೈ ಬಿಜೆಪಿ ಸಾಧನೆಯನ್ನು ತಮ್ಮದೆಂದು ಹೇಳಿಕೊಳ್ಳುವ ಮೂಲಕ ಕೀಳುಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಪ್ರಸ್ತಾವನೆ ಸಲ್ಲಿಸಿ, ಮಂಜೂರಾತಿ ಪಡೆದ ಯೋಜನೆಗಳ ಅನುಷ್ಠಾನ ಸಂದರ್ಭ ಶಾಸಕರು ಅಧಿಕಾರಗಳಿಗೆ ಬೆದರಿಕೆಯೊಡ್ಡಿ ಗುದ್ದಲಿ ಪೂಜೆ ನಡೆಸುವ ಮೂಲಕ ಕೀಳುಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದು ಇದು ಅವರಿಗೆ ಶೋಭೆ ತರುವಂತದಲ್ಲ ಎಂದರು.
ಕುಲಾಲ್ ರಾಜಿನಾಮೆ ಅಂಗೀಕಾರವಿಲ್ಲ: ಬಂಟ್ವಾಳ ಪುರಸಭೆ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಆನಂದ ಕುಲಾಲ್ ರಾಜಿನಾಮೆಯನ್ನು ಪಕ್ಷ ಅಂಗೀಕರಿಸಲಾಗಿಲ್ಲ. ಅಂತಹ ಕಾರ್ಯಕರ್ತರನ್ನು ಪಕ್ಷದಲ್ಲಿ ಉಳಿಸಿಲಾಗುವುದು. ಈ ನಿಟ್ಟಿನಲ್ಲಿ ಮಾತುಕತೆ ಮುಂದುವರಿದಿದೆ ಎಂದು ಪದ್ಮನಾಭ ಕೊಟ್ಟಾರಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಣ, ಹೆಂಡ, ಅಪಪ್ರಚಾರದ ಸೋಲು: ಇತ್ತೀಚೆಗೆ ನಡೆದ ಬಂಟ್ವಾಳ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಸೋಲು ಅನಿರೀಕ್ಷಿತವಾಗಿದ್ದು ಕಾಂಗ್ರೆಸ್ ಮತದಾರರಿಗೆ ಹಣ, ಹೆಂಡ ಹಂಚಿ ವ್ಯಕ್ತಿಯಾಧರಿತ ಅಪಪ್ರಚಾರದ ಮೂಲಕ ಗೆಲವು ಸಾಧಿಸಿದ್ದು, ಇದು ಕಾಂಗ್ರೆಸ್‌ನ ನೈಜ ಗೆಲುವು ಅಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ನೂತನ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ ಹೇಳಿದರು.
ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ್, ಜಿ.ಆನಂದ, ದೇವಪ್ಪ ಪೂಜಾರಿ, ನೇಮಿರಾಜ ರೈ, ಆನಂದ ಶಂಭೂರು, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಗೋಪಾಲಸುವರ್ಣ, ಕಮಲಾಕ್ಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.