ಕೊಲೆ ಯತ್ನ: ಒಂದೇ ಕುಟುಂಬದ 6 ಮಂದಿಗೆ 12 ವರ್ಷ ಸಜೆ
ಉಡುಪಿ: ಒಂದೇ ಕುಟುಂಬದ ಮೂರು ಮಂದಿಯನ್ನು ಕೊಲೆಗೈಯ್ಯಲು ಯತ್ನಿಸಿದ ಮತ್ತೊಂದು ಕುಟುಂಬದ 6 ಮಂದಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಶುಕ್ರವಾರ 12 ವರ್ಷಗಳ ಸಜೆ ವಿಧಿಸಿದೆ. ಆರೋಪಿಗಳು ಬ್ರಹ್ಮಾವರ ಸಮೀಪದ ಆರೂರು ಗ್ರಾಮದ ನಿವಾಸಿಗಳಾದ ನೈನೇಶ್, ಸುದರ್ಶನ್, ಸುಭಾಷ್, ಆತನ ಹೆಂಡತಿ ನಳಿನಿ, ಸಂತೋಷ್, ಆತನ ತಾಯಿ ಸುನಂದ. ಅವರು ನೆರೆಮನೆಯ ವಿನ್ಸೆಂಟ್ ಪಾಯಸ್, ಆತನ ತಂದೆ ಲೂಯಿಸ್ ಮತ್ತು ಕ್ರಿಶ್ಚಿಯಾನ ಎಂಬವರನ್ನು 2009ರ ಜ.8ರಂದು ಮಾರಣಾಂತಿಕವಾಗಿ ಹೊಡೆದು ಕೊಲೆಗೈಯಲು ಯತ್ನಿಸಿದ್ದರು. ನೈನೇಶ್ 2008ರಲ್ಲಿ ಬೆಂಗಳೂರಿನಿಂದ ಯುವತಿಯೊಬ್ಬಳನ್ನು ಅಪಹರಿಸಿಕೊಂಡು ಊರಿಗೆ ಬಂದಿದ್ದ. ಆತನನ್ನು ಹಿಡಿಯುವಲ್ಲಿ ಪೊಲೀಸರಿಗೆ ವಿನ್ಸೆಂಟ್ ಸಹಾಯ ಮಾಡಿದ್ದರು. ಇದೇ ಸಿಟ್ಟಿನಲ್ಲಿ ನೈನೇಶ್ ಮತ್ತು ಮನೆಯವರು ಸೇರಿ ವಿನ್ಸೆಂಟ್ ಮೇಲೆ ಹಲ್ಲೆ ನಡೆಸಿದಾಗ, ತಡೆಯಲು ಬಂದ ಆತನ ತಂದೆ- ತಾಯಿಯ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ದಾಖಲಾಗಿತ್ತು. ತನಿಖೆ, 12 ಸಾಕ್ಷಿಗಳ ವಿಚಾರಣೆಯ ನಂತರ ಶುಕ್ರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರೇಂದ್ರ ಕುಮಾರ ಗುಣಕಿ ಅವರು ಆರೋಪಿಗಳಿಗೆ 12 ವರ್ಷಗಳ ಜೈಲುವಾಸ ವಿಧಿಸಿದ್ದಾರೆ. ದೂರದಾರರ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಎಸ್. ಚಿತ್ತೂರಿ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

